ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಹೊಡೆದಾಟ : ಪ್ರಕರಣ ದಾಖಲು

ಕಲಬುರಗಿ : ನಗರದ ಹೊರವಲಯದಲ್ಲಿರುವ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಸಂಜೆ ವೇಳೆಯಲ್ಲಿ ಕೈದಿಗಳ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ನಡೆದಿದೆ.
ಗಲಾಟೆಯಲ್ಲಿ ಕೈದಿಯೊಬ್ಬರು ಮತ್ತೊಬ್ಬ ಕೈದಿಯ ಕತ್ತಿಗೆ ಹರಿತ ವಸ್ತುವಿನಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಮಾಯಿಲ್ ಮೌಲಾನಾಸಾಬ್ (37) ಗಾಯಗೊಂಡ ಕೈದಿ. ಹಸನ್ ಶೇಖ್ (48) ಹಲ್ಲೆ ನಡೆಸಿದ ಕೈದಿ ಎಂದು ಪೊಲೀಸ್ ಮೂಲಗಳು ಹೇಳಿವೆ.
ಗಾಯಗೊಂಡಿರುವ ಕೈದಿ ಇಸ್ಲಾಯಿಲ್‌ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಮೂಲದ ಇಸ್ಮಾಯಿಲ್ ಮೌಲಾನಾಸಾಬ್ ಪೋಕ್ಸೊ ಪ್ರಕರಣದಲ್ಲಿ ಬಂದಿಯಾಗಿದ್ದು, ಹಸನ್ ಶೇಖ್ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣದ ಕೈದಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





