ಕಲಬುರಗಿ: ಬಾಲ ಸಾಹಿತ್ಯ ಪ್ರಶಸ್ತಿ ವಿಜೇತ ಗಝನ್ಫರ್ ಇಕ್ಬಾಲ್ ಗೆ ಕನ್ನಡ ಭವನದಲ್ಲಿ ಸನ್ಮಾನ

ಕಲಬುರಗಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಾಲ ಸಾಹಿತ್ಯ ಪ್ರಶಸ್ತಿ ಪಡೆದ ಡಾ. ಗಝನ್ಫರ್ ಇಕ್ಬಾಲ್ ಅವರಿಗೆ ಕಲಬುರಗಿಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗುರುವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಡಾ. ಗಝನ್ಫರ್ ಇಕ್ಬಾಲ್, ತಮ್ಮ 'ಕೌಮಿ ಸಿತಾರೆ' ಕೃತಿಗೆ ಅಕಾಡೆಮಿಯು ಪ್ರಶಸ್ತಿ ಬoದಿರುವುದು ಹೆಮ್ಮೆ ಎನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೆಗಲ್ಟಿಪ್ಪಿ ಅವರು, "ಸಾಹಿತ್ಯಕ್ಕೆ ಧರ್ಮವಿಲ್ಲ. ನಮ್ಮ ದೇಶದಲ್ಲಿ ಪ್ರತಿಯೊಂದು ಭಾಷೆಗೂ ಅಂತರ್ಗತ ಸಂಬoಧವಿದೆ. ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು," ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರಕುಮಾರ್ ಬಂಟನಳ್ಳಿ, ಬಾಬುರಾವ್ ಪಾಟೀಲ್, ಪ್ರಣವ್ ಪತ್ತಣ್ಕರ್, ನಜೀರ್ ಮುತವಲ್ಲೀ, ನವಾಬ್ ಖಾನ್, ರಾಜೇಂದ್ರ ಮಡ್ಬೋಲ್, ಎಂ.ಎನ್. ಸುಗಂಧಿ, ಆರ್.ಎಸ್.ಜೀವಣಗಿ, ಕಲಾವಿದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್, ರಾಜಶೇಖರ್ ಎಸ್, ಸಾಹಿತ್ಯಿಕ ಸಾದಿಕ್ ಕಿರ್ಮಾನಿ, ಮಂಜೂರ್ ವಿಖಾರ್, ಮುಜೀಬ್ ಅಲಿ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





