ಸಣ್ಣ ನೀರಾವರಿ ಸಚಿವ ಡಾ.ಅಜಯಸಿಂಗ್‌ಗೆ ಕಲಬುರಗಿಯಲ್ಲಿ ಭವ್ಯ ಸ್ವಾಗತ

ಕಲಬುರಗಿ: ಸಣ್ಣ ನೀರಾವರಿ ಸಚಿವರಾಗಿ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ ಡಾ. ಅಜಯಸಿಂಗ್ ಅವರಿಗೆ ಅಖಿಲ ಕರ್ನಾಟಕ ಡಾ. ಅಜಯಸಿಂಗ್ ಅಭಿಮಾನಿಗಳ ಸಂಘದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ ಬಿ. ಪಾಟೀಲ ಅವರ ನೇತೃತ್ವದಲ್ಲಿ ನಗರೇಶ್ವರ ಶಾಲೆಯಿಂದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಭಾಜಾ-ಭಜಂತ್ರಿ, ನಾಸಿಕ್ ಡೋಲ್, ಡೊಳ್ಳು ಕುಣಿತ, ಹಲಗೆ ವಾದನ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನಗಳು ಗಮನ ಸೆಳೆದವು.
ಜಗತ್ ವೃತ್ತದಲ್ಲಿ ಡಾ. ಅಜಯಸಿಂಗ್ ಅವರಿಗೆ ಬೃಹತ್ ಹೂವಿನ ಮಾಲಾರ್ಪಣೆ ಮಾಡಿ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಯಘೋಷಗಳೊಂದಿಗೆ ಸಚಿವರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು, ಶಾಸಕರು, ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.
Next Story




