ನಮ್ಮ ವಿದೇಶಾಂಗ ನೀತಿಯನ್ನು ಟ್ರಂಪ್ ಗೆ ಅಡಾ ಇಟ್ಟಿದ್ದಿರಾ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕಲಬುರಗಿ : ಪ್ರತಿ ಬಾರಿಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ- ಪಾಕಿಸ್ತಾನ ಮಧ್ಯೆ ಕದನ ವಿರಾಮ ನನ್ನಿಂದ ಆಗಿದೆ ಎಂದು ಹೇಳುತ್ತಿದ್ದಾರೆ, ನಮ್ಮ ವಿದೇಶಾಂಗ ನೀತಿಯನ್ನು ಟ್ರಂಪ್ ಅವರಿಗೆ ಅಡಾ ಇಟ್ಟಿದ್ದಿರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಆಪ್ತ ಮಿತ್ರ ಟ್ರಂಪ್ ನಾಲ್ಕು ಬಾರಿ ಭಾರತ ಮತ್ತು ಪಾಕ್ ಯುದ್ಧ ನಿಲ್ಲಿಸಿರುವುದ್ದಾಗಿ ಹೇಳಿದ್ದಾರೆ. ನಿನ್ನೆ ಸೌದಿ ಅರೇಬಿಯಾದಲ್ಲಿ ಟ್ರಂಪ್ ಅದೇ ಹೇಳಿದ್ದಾರೆ. ಮೋದಿ ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ಅವರು ಓಪನ್ ಪ್ರೆಸ್ ಕಾನ್ಫರೇನ್ಸ್ ಮಾಡಲಿ. ಅವರ ಮನ್ ಕೀ ಬಾತ್ ಕೇಳಿ ಜನರ ಕಿವಿ ಕಿತ್ತು ಹೋಗಿದೆ. ಮಾಧ್ಯಮ ಸ್ನೇಹಿತರು ಹಾಗೂ ಇತರೆ ಮಾಧ್ಯಮದವರ ಜೊತೆ ಪ್ರೆಸ್ ಕಾನ್ಫರೇನ್ಸ್ ಮಾಡಿ, ಆಗ ನಾವು ಮೋದಿ ಅವರಿಗೆ 56 ಇಂಚು ಎದೆ ಇದೆ ಎಂದು ಒಪ್ಪುತ್ತೆವೆ ಎಂದ ಅವರು, ಟ್ರಂಪ್ - ಮೋದಿ ಸ್ನೇಹದಲ್ಲಿ ಎಷ್ಟು ಆಳ ಇದೆ ಎನ್ನುವುದು ಗೊತ್ತಿಲ್ಲ ಎಂದರು.
ಎ.22ರಿಂದ ಮೇ 13ರವರೆಗೆ ಏಲ್ಲಿ ಹೋಗಿದ್ದರು ಪ್ರಧಾನಿ :
ಭಾರತ-ಪಾಕ್ ಯುದ್ಧ ಕದನ ವಿರಾಮ ಹಿನ್ನೆಲೆ ಅದಂಪೂರ ಸೇನಾ ಕೇಂದ್ರಕ್ಕೆ ಮೋದಿ ಭೇಟಿ ನೀಡಿ, ಸೈನಿಕರಿಗೆ ನೈತಿಕ ಧೈರ್ಯ ತುಂಬುವುದು ಅವರ ಕರ್ತವ್ಯವಾಗಿದೆ. ಆದರೆ ಹಲವು ಪ್ರಶ್ನೆಗಳಿಗೆ ಮೋದಿ ಅವರು ಇಲ್ಲಿವರೆಗೆ ಉತ್ತರಿಸಿಲ್ಲ ಎಂದ ಅವರು, ಎ.22ರಿಂದ ಮೇ 13ರವರೆಗೆ ಪ್ರಧಾನಿ ಎಲ್ಲಿಗೆ ಹೋಗಿದ್ದರು. ಎ.22 ರಂದು ಪಹಲ್ಗಾಮ್ ಘಟನೆ ನಡೆದರೂ ಮೋದಿ ಬಿಹಾರ ಚುನಾವಣೆಯಲ್ಲಿ ಇದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಅವರು ಎಲ್ಲಿಯೂ ಕಂಡಿಲ್ಲ. ಒಮ್ಮೆ ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಬಳಿಕ ಮೇ12ರಂದು ಮೋದಿ ಮನ್ ಕೀ ಬಾತ್ ಆಡಿದ್ರು ಎಂದು ಹೇಳಿದರು.







