ಬಸವ ಚಳುವಳಿಗೆ ಹಾವಿನಾಳ ಕಲ್ಲಯ್ಯನವರ ಕೊಡುಗೆ ಅಪಾರ: ರಮೇಶ್ ಲೋಹಾರ

ಆಳಂದ: "12ನೇ ಶತಮಾನದಲ್ಲಿ ಬಸವಾದಿ ಶರಣರ ಸಮಕಾಲೀನಾರಗಿ ಕಲ್ಯಾಣದಲ್ಲಿ ಕಾಯಕವನ್ನು ಮಾಡಿ, ಅವರ ವಚನಗಳು ಶರಣ ಪರಂಪರೆಗೆ ಮೆರಗು ತಂದುಕೊಟ್ಟ ಹಾವಿನಾಳ ಕಲ್ಲಯ್ಯನವರು ಕಂಬಾರ ಸಮುದಾಯಕ್ಕೆ ಸೀಮಿತವಾಗದೆ ಮಾನವ ಕುಲದ ಏಳಿಗೆಯನ್ನು ಬಯಸಿ ದಾರಿದೀಪವಾಗಿದ್ದಾರೆ" ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ್ ಲೋಹಾರ ಹೇಳಿದರು.
ಪಟ್ಟಣದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯ ತಾಲೂಕು ಘಟಕದ ಆಶ್ರಯದಲ್ಲಿ ಕಾಯಕ ಯೋಗಿ ಶರಣ ಕಮ್ಮಾರ ಕಲ್ಲಯ್ಯನವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಲೋಹಾರ, ಕಲ್ಲಯ್ಯನವರಂತಹ ಶರಣರು ಕೇವಲ ತಮ್ಮ ಸಮುದಾಯಕ್ಕೆ ಸೀಮಿತವಾಗದೆ ಸಮಗ್ರ ಮಾನವತೆಯ ಉನ್ನತಿಗಾಗಿ ಕೆಲಸ ಮಾಡಿದ್ದಾರೆ. ಅವರ ಕಾಯಕ ತತ್ವಗಳು ಮತ್ತು ವಚನಗಳು ಇಂದಿಗೂ ನಮಗೆ ಪ್ರೇರಣೆಯಾಗಿವೆ ಎಂದರು.
ಈ ವೇಳೆ ಕಾರ್ಯಕ್ರಮಲ್ಲಿ ಸಾನಿಧ್ಯ ವಹಿಸಿದ್ದ ತೋಂಟದಾರ್ಯ ಅನುಭವ ಮಂಟಪದ ಕೊರಣೇಶ್ವರ ಸ್ವಾಮೀಜಿ, ಶರಣ ಕಲ್ಲಯ್ಯನವರು ಬಸವಾಣ ಸಮಾಜದಲ್ಲಿ ಕಾಯಕದ ಮೂಲಕ ಸಮಾನತೆ ಮತ್ತು ಭಕ್ತಿಯ ಸಂದೇಶವನ್ನು ಹರಡಿದ್ದಾರೆ. ಇಂದಿನ ಯುಗದಲ್ಲಿ ನಾವು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪೂಜಾ ರಮೇಶ್ ಲೋಹಾರ್, ಮಹಾದೇವ್ ಕಾಂಬಳೆ ಸೇರಿದಂತೆ ಅನೇಕ ಶರಣ ಶರಣೆಯರು ಪಾಲ್ಗೊಂಡಿದ್ದರು.





