ಕಲಬುರಗಿಯ ಕರ್ನಾಟಕ ಮಾಹಿತಿ ಆಯೋಗ ಪೀಠದಲ್ಲಿ ರಾಷ್ರಧ್ವಜಾರೋಹಣ

ಕಲಬುರಗಿ : ಕಲಬುರಗಿ ನಗರದ ಮಹಲ್-ಎ-ಶಾಹಿಯ ಅತಿಥಿಗೃಹ ಅವರಣದಲ್ಲಿರುವ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಕಚೇರಿಯಲ್ಲಿ ರವಿವಾರ 76ನೇ ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಮಾಹಿತಿ ಆಯುಕ್ತರಾದ ರವೀಂದ್ರ ಗುರುನಾಥ ಧಾಕಪ್ಪ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಆಯುಕ್ತರು, ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ದೇಶ, ಈ ದೇಶವನ್ನು ಪರಮೋಚ್ಛ ಗ್ರಂಥ ಸಂವಿಧಾನ ನಡೆಸುತ್ತಿದೆ. ಹೀಗಾಗಿ ದೇಶದ ಪ್ರತಿ ಪ್ರಜೆ ಸಂವಿಧಾನಕ್ಕೆ ಗೌರವ ನೀಡಿ, ಅದರಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಯೋಗದ ಅಧಿಕಾರಿ, ಸಿಬ್ಬಂದಿಗಳು, ಅತಿಥಿಗೃಹದ ಸಿಬ್ಬಂದಿಗಳು ಇದ್ದರು.
ಇದಕ್ಕೂ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಆಯುಕ್ತರು ಪೂಜೆ ಸಲ್ಲಿಸಿದರು.
Next Story







