ಕಲಬುರಗಿಯ ಹಝರತ್ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಇಮಾಮ್ ಹುಸೈನ್ ಸ್ಮರಣಾರ್ಥ ಸಭೆ

ಕಲಬುರಗಿ: ಐತಿಹಾಸಿಕ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದಲ್ಲಿ ಸಯ್ಯಿದುಶ್ ಶುಹದಾ ಹಜರತ್ ಇಮಾಮ್ ಹುಸೈನ್ (ರ.ಅ) ಅವರ ಶಹಾದತ್ ಸ್ಮರಣಾರ್ಥ ಮರ್ಕಝಿ ಜಲ್ಸಾ-ಎ-ಶಹಾದತ್ ಭವ್ಯವಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಮಜ್ಲಿಸ್ ಮುಹಿಬ್ಬಾನ್-ಎ-ಮುಸ್ತಫಾ ವ ಅಹ್ಲೆ ಬೈತ್ ವ ಅವ್ಲಿಯಾ-ಎ-ಕಿರಾಮ್, ಅಹ್ಲೆ ಸುನ್ನತ್ ವಲ್ ಜಮಾಅತ್, ಕಲಬುರಗಿ ವತಿಯಿಂದ, ಹಜರತ ಖ್ವಾಜಾ ಬಂದೇ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಫಿಜ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸ್ಸೇನಿ ಅವರ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ದರ್ಗಾ ಹಜ್ರತ್ ಖ್ವಾಜಾ ಬಂದೇನವಾಜ್ (ರ.ಅ) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಜ್ರತ್ ಡಾ. ಹಾಫಿಜ್ ಸಯ್ಯದ್ ಮುಹಮ್ಮದ ಅಲಿ ಅಲ್-ಹುಸ್ಸೇನಿ ಸಾಹೇಬ್ ಕಿಬ್ಲಾ ಅವರು, ಹಜ್ರತ್ ಇಮಾಮ್ ಹುಸೈನ್ (ರ.ಅ) ಅವರು ಮಹಾನ್ ಶಹಾದತ್ ಸತ್ಯ, ಧರ್ಮನಿಷ್ಠೆ, ತ್ಯಾಗ ಮತ್ತು ಇಸ್ಲಾಂ ಧರ್ಮದ ಶ್ರೇಷ್ಠತೆಯ ಶಾಶ್ವತ ಸಂಕೇತವಾಗಿದೆ ಎಂದು ಹೇಳಿದರು.
ಹೈದರಾಬಾದ್‌ನ ಮೌಲಾನಾ ಸಯ್ಯದ್ ಕಲೀಮುಲ್ಲಾ ಅಮೀನಿ ಕಾಶಿಫ್ ಪಾಶಾ ಹಾಗೂ ಸುನ್ನಿ ದಾವತ್-ಎ-ಇಸ್ಲಾಮಿಯ ಮೌಲಾನಾ ಅಲ್-ಹಾಜ್ ಸಯ್ಯದ್ ಅಮೀನ್ ಖಾದ್ರಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಸಯ್ಯಿದುಶ್ ಶುಹದಾ ಹಜರತ್ ಇಮಾಮ್ ಹುಸೈನ್ (ರ.ಅ) ಅವರ ಅಪೂರ್ವ ತ್ಯಾಗವನ್ನು ಸ್ಮರಿಸಿ, ಕರ್ಬಲಾದ ಶಾಶ್ವತ ಸಂದೇಶವಾದ ಸತ್ಯ, ನ್ಯಾಯ, ತಾಳ್ಮೆ, ತ್ಯಾಗ ಮತ್ತು ಧರ್ಮನಿಷ್ಠೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಸಯ್ಯದ್ ಮುಸ್ತಫಾ ಅಲ್-ಹುಸೈನಿ, ಸಯ್ಯದ್ ಮುಹಮ್ಮದ್ ಸಯ್ಯದ್ ಹುಸೈನಿ, ಸಯ್ಯದ್ ಆಲಂ ಹುಸೈನಿ, ಸಯ್ಯದ್ ಮುರ್ತಝಾ ಅಮೀನಿ, ಸಯ್ಯದ್ ಆಕಿಬ್ ಹುಸೈನಿ, ಮೌಲಾನಾ ಸಯ್ಯದ್ ಅಬ್ದುಲ್ ರಶೀದ್, ಮೌಲಾನಾ ಮುಹಮ್ಮದ್ ತನ್ವೀರ್ ಅಹ್ಮದ್ ಅಶ್ರಫಿ, ಮುಫ್ತಿ ಹಾಫಿಜ್ ಸಯ್ಯದ್ ಅಬ್ದುಲ್ ರಊಫ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






