ಸರ್ಕಾರಿ ನೌಕರರ ಸಂಘದ ಕಲಬುರಗಿ ಉತ್ತರ ವಲಯದ ಮಾಧ್ಯಮ ಪ್ರತಿನಿಧಿಯಾಗಿ ಜಹಾಂಗೀರ್ ಆಯ್ಕೆ

ಕಲಬುರಗಿ : ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ (ರಿ), ಕಲಬುರಗಿ ಉತ್ತರ ವಲಯ ತಾಲೂಕು ಘಟಕದ ಮಾಧ್ಯಮ ಪ್ರತಿನಿಧಿಯಾಗಿ ಜಹಾಂಗೀರ್ ರಹಮತ್ ಉಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ತಿಳಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ನಗರದ ಮದೀನಾ ಕಾಲೋನಿಯಲ್ಲಿರುವ ಕೆ.ಪಿ.ಎಸ್. ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಹಾಂಗೀರ್ ರಹಮತ್ ಉಲ್ಲಾ ಅವರನ್ನು ಸಂಘದ ಮಾಧ್ಯಮ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದ್ದು, ಕೇಂದ್ರ ಸಂಘದ ಅಡಿಯಲ್ಲಿ ಸಂಘವನ್ನು ಬಲಪಡಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕೆಂದು ತಿಳಿಸಿದ್ದಾರೆ.
Next Story





