ಜೇವರ್ಗಿ | ಶರಣ–ಸೂಫಿ ಸಂತರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಕೊರಣೇಶ್ವರ ಸ್ವಾಮೀಜಿ
ಶಿಕ್ಷಕಿ ಪ್ರಭಾವತಿ ಇಮ್ಮಣ್ಣಿ ಅವರ ಮೂರು ಕೃತಿಗಳ ಲೋಕಾರ್ಪಣೆ

ಜೇವರ್ಗಿ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶರಣರು ಹಾಗೂ ಸೂಫಿ ಸಂತರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾಲಕ್ಷ್ಮಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕಿ ಪ್ರಭಾವತಿ ಜಗನ್ನಾಥ ಇಮ್ಮಣ್ಣಿ ಅವರ ‘ಅಮ್ಮ ಎಂದರೆ ಅದ್ಭುತ’, ‘ಮನದ ದೀವಿಗೆ’ ಹಾಗೂ ‘ಕರಗಿದ ಕಾಮೋರ್ಡ್’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪುಸ್ತಕ ಬರೆಯುವುದು ಮತ್ತು ಮುದ್ರಿಸುವುದು ಸುಲಭದ ಕೆಲಸವಲ್ಲ; ಅದು ಒಂದು ಸಾಧನೆ. ಶ್ರಮಪಟ್ಟು ಕೃತಿಗಳನ್ನು ಹೊರತಂದರೂ ಅವುಗಳನ್ನು ಖರೀದಿಸಿ ಓದುವ ಮನೋಭಾವ ಯುವಜನರಲ್ಲಿ ಕಡಿಮೆಯಾಗಿರುವುದು ನೋವಿನ ಸಂಗತಿ. ಲೇಖಕರಿಗೆ ಸಿಗುವ ದೊಡ್ಡ ಗೌರವವೆಂದರೆ ಓದುಗರು ಅವರ ಪುಸ್ತಕಗಳನ್ನು ಓದುವುದೇ ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಸೊನ್ನ ಕಾಲೇಜಿನ ಪ್ರಾಚಾರ್ಯ ಸದಾನಂದ ಪಾಟೀಲ ಕೃತಿಗಳ ಪರಿಚಯ ಮಾಡಿಕೊಟ್ಟರು.
ಬಿಜೆಪಿ ಮುಖಂಡ ಶಿವರಾಜ ಪಾಟೀಲ ರದ್ದೇವಾಡಗಿ, ರಾಜಶೇಖರ ಸಿರಿ, ಸಿ.ಎಸ್. ಮಾಲಿಪಾಟೀಲ, ಶಿವಣ್ಣಗೌಡ ಪಾಟೀಲ ಹಂಗರಗಿ, ದಾನಪ್ಪಗೌಡ ಹಳಿಮನಿ ಹಾಗೂ ವೀರೇಶ ಕಂದಗಲ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರೆ, ಶಿಕ್ಷಕಿ ಪ್ರಭಾವತಿ ಇಮ್ಮಣ್ಣಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಾಚಾರ್ಯ ಡಾ. ಧರ್ಮಣ್ಣ ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಸಿ.ಎಸ್. ಆನಂದ, ವಿಜಯಕುಮಾರ ಪರತೆ ಹಾಗೂ ಶರಣಗೌಡ ಪಾಟೀಲಪಾಳಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೋಲ್ಲಾಳಪ್ಪ ಯಾತನೂರ, ಮಹಾಂತಯ್ಯ ಹಿರೇಮಠ, ಶರಣಗೌಡ ಪಾಟೀಲ ಯಲಗೋಡ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಶಿವಶರಣಪ್ಪ ಹಳಿಮನಿ, ರಾಜಕುಮಾರ ಸುಂಬಡ, ವೆಂಕಟರಾವ್ ಮುಜುಮದಾರ, ಶಿವಾನಂದ ದ್ಯಾಮಗೊಂಡ, ಶ್ರೀಹರಿ ಕರಕಿಹಳ್ಳಿ, ಬಸವರಾಜ ಚಿನಗುಡಿ, ಭಗವಂತರಾಯ ಬೆಣ್ಣೂರ, ಅನೀಲ್ ಬಿರಾದಾರ, ಅಮೀನಪ್ಪ ಹೊಸಮನಿ, ಈಶ್ವರ ಹಿಪ್ಪರಗಿ, ವೀರಯ್ಯ ಹಿರೇಮಠ, ಲಕ್ಷ್ಮೀಕಾಂತ ಕುಲಕರ್ಣಿ, ಜಗದೀಶ ಉಕನಾಳ, ಲಿಂಗರಾಜ ಹಿರೇಗೌಡ, ಸಾಹೇಬಗೌಡ ಹರನೂರ ಉಪಸ್ಥಿತರಿದ್ದರು.
ಸುರೇಶ ಹಿರೇಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ನೇದಲಗಿ ನಿರೂಪಿಸಿದರು. ಸಾವಿತ್ರಿ ಮನಗೂಳಿ ವಂದಿಸಿದರು.






