ಜೇವರ್ಗಿ | ಲಾರಿ–ಕೆಕೆಆರ್‌ಟಿಸಿ ಬಸ್ ನಡುವೆ ಅಪಘಾತ: ಪ್ರಯಾಣಿಕನ ಕೈಗೆ ಗಂಭೀರ ಗಾಯ

ಜೇವರ್ಗಿ: ಲಾರಿ ಹಾಗೂ ಕೆಕೆಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಪ್ರಯಾಣಿಕರೊಬ್ಬರ ಕೈಗೆ ಗಂಭೀರ ಗಾಯವಾದ ಘಟನೆ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.
ಜೇವರ್ಗಿ ಸಮೀಪದ ರೇವನೂರು ಗ್ರಾಮದ ನಿವಾಸಿ ಅರುಣ್ ಕುಮಾರ್ ಗಾಯಗೊಂಡವರು. ಅಪಘಾತದ ತೀವ್ರತೆಗೆ ಅವರ ಕೈಗೆ ಗಂಭೀರ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಯುವ ನಾಯಕ ಇಮ್ರಾನ್ ಕುಕನೂರು ಅವರು ತಕ್ಷಣ ನೆರವಿಗೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ಜೇವರ್ಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story




