ಕಲಬುರಗಿ| ಜೇವರ್ಗಿ ಕಲ್ಕತ್ತ ದೇವಿಯ ಜಾತ್ರೆ, ಶಾಸಕ ಸೇರಿ ಹಲವು ಗಣ್ಯರು ಭಾಗಿ

ಕಲಬುರಗಿ: ಶ್ರೀ ಮರಗಮ್ಮ ( ಕಲ್ಕತ್ತ ) ರಥೋತ್ಸವ ಶನಿವಾರ ಲಕ್ಷಾಂತರ ಭಕ್ತ ಸಮೂಹ ಮಧ್ಯೆ ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಸಂಪ್ರದಾಯದಂತೆ ದೇವಿಯ ರಥೋತ್ಸವ ಬೆಳಗ್ಗೆ 10 ಗಂಟೆಗೆ ದೇವಿಯ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚಾರ ನಡೆಸಿ ರಾಷ್ಟ್ರೀಯ ಹೆದ್ದಾರಿಯಿಂದ ಬುಟ್ನಾಳ ರಸ್ತೆಯ ಮೂಲಕ ದೇವಿಯ ರಥೋತ್ಸವವನ್ನು ತಳವಾರ ಸಮುದಾಯದ ಜನರು ಮತ್ತು ಗ್ರಾಮಸ್ಥರು ದೇವಿಯ ಭಕ್ತರು ಸೇರಿಕೊಂಡು ದೇವಿಯ ಮೂರ್ತಿಯನ್ನು ಹೊತ್ತುಕೊಂಡು ದೇವಿಯ ಹೊರವಲಯದಲ್ಲಿರುವ ದೇವಿಯ ತಳಕ್ಕೆ ತೆಗೆದುಕೊಂಡು ಹೋಗಲಾಯಿತು.
ಮಹಾತಾಯಿ ಕಲ್ಕತ್ತ ದೇವಿಯ ರಥೋತ್ಸವವನ್ನು ಬೆಳಗ್ಗೆ 10 ಕ್ಕೆ ಶುಭ ಮೂಹರ್ತದಲ್ಲಿ ದೇವಿಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವಕ್ಕೂ ಮುನ್ನಾ ದೇವಿಯ ದರ್ಶನಕ್ಕೆ ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ತಾಲೂಕಿನ ಗಣ್ಯರು ದೇವಿಯ ದರ್ಶನ ಪಡೆದುಕೊಂಡರು. ನಂತರ ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಕಲ್ಕತ್ತ ದೇವಿಯ ದೇವಸ್ಥಾನದಿಂದ ಹೊರವಲಯದ ( ದೇವಿಯ ತಳ) ಕ್ಕೆ ಲಕ್ಷಾಂತರ ಭಕ್ತರ ನಡುವೆ ಜೈ ಕಲ್ಕತ್ತ ದೇವಿ ಮಹಾರಾಜಕೀ ಜೈ, ಮರೆಮ್ಮ ದೇವಿ ಮಹಾರಾಜಕೀ ಜೈ, ಮಹಾಲಕ್ಷ್ಮೀ ದೇವಿ ಮಹಾರಜಕೀ ಜೈ ವಿವಿಧ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ರಾಜ ಬೀದಿಗಳಲ್ಲಿ ರಥೋತ್ಸವ ಜರುಗಿತು.
ರಥೋತ್ಸವದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಪಿಐ ರಾಜೆಸಾಬ ನದಾಫ್, ಪಿಎಸ್‍ಐ ಗಜಾನನ ಬಿರಾದಾರ ನೇತೃತ್ವದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಷಣ್ಮುಖಪ್ಪ ಸಾಹು ಗೋಗಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ಶ್ರೀಶೈಲಗೌಡ ಪೊಲೀಸ ಪಾಟೀಲ, ಗುಂಡು ಸಹು ಗೋಗಿ, ಮಲ್ಲಿಕಾರ್ಜುನ ಅವಟಿ, ಭೀಮರಾಯ ಸುರಪುರ, ಶರಣಗೌಡ ಸರಡಗಿ, ಅನೀಲ ರಾಂಪೂರ, ಶಾಂತವೀರ ಪಾಟೀಲ, ಸಂತೋಷ ಸೊಪ್ಪಣ್ಣ, ಕುಪ್ಪಣ್ಣ ಕಲ್ಲಾ, ಷಣ್ಮೂಖಯ್ಯ ಘಂಟಿಮಠ, ನಿಂಗಣ್ಣ ಬಸವಪಟ್ಟಣ, ವಿಶ್ವನಾಥ ಇಮ್ಮಣ್ಣಿ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಈಶ್ವರ ಹಿಪ್ಪರಗಿ, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಮೌನೇಶ ಹಂಗರಗಿ, ಅನಿಲ ದೊಡಮನಿ, ಬಸವರಾಜ ಲಾಡಿ, ಭೀಮು ತಳವಾರ, ಗಿರೀಶ ತುಂಬಗಿ, ಷಣ್ಮೂಖ ಬಸವಪಟ್ಟಣ್ಣ, ಶರಣಗೌಡ ಅವಟಿ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಇದ್ದರು.







