ಜೇವರ್ಗಿ: ಭೀಮಾ ನದಿಗೆ ಈಜಲು ಇಳಿದ ವಿದ್ಯಾರ್ಥಿ ಮೃತ್ಯು

ಕಲಬುರಗಿ, ಎ.3: ನದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಲಾಲಸಾಬ ಸರ್ದಾರ ಪಟೇಲ್ (19 ) ಎಂದು ಗುರುತಿಸಲಾಗಿದೆ.
ಕದಂಬ ಪಿಯು ಕಾಲೇಜ ಜೇವರ್ಗಿಯಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಲಾಲಸಾಬ, ಗುರುವಾರ ಮಧ್ಯಾಹ್ನ ಗೆಳೆಯರೊಂದಿಗೆ ಭೀಮಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





