ಜೇವರ್ಗಿ| ಭಾರತ್ ಬಂದ್ ಮುಷ್ಕರಕ್ಕೆ ಸಿಐಟಿಯು, ರೈತ ಸಂಘಟನೆಗಳ ಬೆಂಬಲ

ಕಲಬುರಗಿ : ದೇಶಾದ್ಯಂತ ನಡೆಯುತ್ತಿರುವ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೇಂದ್ರ ಸರ್ಕಾರದ ಕಾರ್ಮಿಕರ ವಿರೋಧಿ ನೀತಿ, ರೈತರ ವಿರೋಧಿ ನೀತಿಯನ್ನು ಮತ್ತು ಕಾರ್ಪೊರೇಟರಗಳ ಪರ ನೀತಿಗಳನ್ನು ವಿರೋಧಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ವ್ಯಾಪಕ ಬೆಂಬಲ ಸೂಚಿಸಿ ಜೇವರ್ಗಿ ತಾಲ್ಲೂಕಿನಲ್ಲಿ ಸಿಐಟಿಯು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ, ರೈತ ಸಂಘಟನೆಗಳು ತಾಲೂಕು ಅಧಿಕಾರಿಗೆ ಮನವಿ ಸಲ್ಲಿಸಿತು.
ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಭಾರತ್ ಬಂದ್ ಮುಷ್ಕರಕ್ಕೆ ಬೆಂಬಲಿಸಿ ವಿವಿಧ ಸಂಘಟನೆಗಳು ಮುಖಂಡರು ಮವಿ ಪತ್ರವನ್ನು ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ನೀತಿ ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕಾರ್ಪೋರೇಟ್ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ತಾಲ್ಲೂಕು ಅಧ್ಯಕ್ಷ ಮಹಾದೇವಪ್ಪ ಕೆಲ್ಲೂರು, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಹಿರೇಗೌಡ, ರೇವಣಸಿದ್ದಯ್ಯ ಹಿರೇಮಠ, ಚೌಡಯ್ಯ ಆರ್ ಹೊನ್ನಾಳ, ಲಕ್ಷ್ಮೀ ಕಾಂತ, ಮಲ್ಲಣ್ಣ ಮಾವುರ, ಬಸಯ್ಯಾ ಸ್ವಾಮಿ ಅಂಕಲಗಿ ರೈತ ಸಂಘಟನೆಯ ಮುಖಂಡರಾದ, ಸಿದ್ದಣ್ಣ ಹರವಾಳ, ಪರಶುರಾಮ ಶಖಾಪುರ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು, ಪದಾಧಿಕಾರಿಗಳು, ಹೋರಾಟಗಾರರು ಉಪಸ್ಥಿತರಿದ್ದರು.







