ಎನ್‌ಐ ಆ್ಯಕ್ಟ್ ವಿಶೇಷ ಲೋಕ ಅದಾಲತ್ ಸದ್ಬಳಕೆಗೆ ನ್ಯಾಯಾಧೀಶೆ ಕರೆ

ಆಳಂದ: ಎನ್‌ಐ ಆ್ಯಕ್ಟ್ ಅಡಿ ಬಾಕಿ ಉಳಿದ ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ಲೋಕ ಅದಾಲತ್‌ನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಆಳಂದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸುಮನ ಚಿತ್ತರಗಿ ಅವರು ವಕೀಲರಿಗೆ ಸಲಹೆ ನೀಡಿದರು.
ಭಾರತ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಆಳಂದ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಎನ್‌ಐ ಆ್ಯಕ್ಟ್ ವಿಶೇಷ ಲೋಕ ಅದಾಲತ್ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರುವ ಜುಲೈ 18 ಹಾಗೂ ನವೆಂಬರ್ 21ರಂದು ನಡೆಯಲಿರುವ ವಿಶೇಷ ಲೋಕ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿ ಸಮಸ್ತ ವಕೀಲರು ತಮ್ಮ ಕಕ್ಷಿದಾರರನ್ನು ಮನವೊಲಿಸಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.
ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳುವುದರಿಂದ ಕಕ್ಷಿದಾರರಿಗೆ ಸಮಯ, ಹಣ ಹಾಗೂ ಮಾನಸಿಕ ಶ್ರಮ ಉಳಿತಾಯವಾಗಲಿದ್ದು, ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ದ್ರುತ ನ್ಯಾಯ ದೊರಕಿಸಿಕೊಡುವ ಈ ವ್ಯವಸ್ಥೆಯನ್ನು ವಕೀಲರು ಮಾರ್ಗದರ್ಶಿಗಳಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ನ್ಯಾಯಾಧೀಶೆ ಒತ್ತಿ ಹೇಳಿದರು.
ಸಭೆಯಲ್ಲಿ ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ. ಸಿಂದೆ, ಸರ್ಕಾರಿ ವಕೀಲ ಜೋತಿ ಬಂದಿ, ಹಿರಿಯ ನ್ಯಾಯವಾದಿ ಡಬ್ಲ್ಯೂ ಅನ್ಸಾರಿ, ಎಸ್.ಡಿ. ಬೋಸಗೆ, ದೇವಾನಂದ ಹೋದಲೂರ, ಮಹಾದೇವ ಹತ್ತಿ, ಯು.ಕೆ. ಇನಾಮದಾರ, ಬಿ.ಎ. ಪವಾರ, ರಮೇಶ ತೋಳೆ, ಸುನಿತಾ ಗಡಬಳಿ, ಗೀತಾ ಹತ್ತರಕಿ, ಬಿ.ಜಿ. ಬೀಳಗಿ ಸೇರಿದಂತೆ ಹಲವು ವಕೀಲರು ಹಾಜರಿದ್ದರು.






