ಕಲಬರಗಿ | ನ್ಯಾಯಾಲಯ ಆವರಣದಲ್ಲಿ 1.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ

ಕಲಬುರಗಿ : ಉತ್ತಮ ಸಮಾಜ ನಿರ್ಮಾಣಲ್ಲಿ ನ್ಯಾಯಾಂಗದ ಪಾತ್ರ ಮುಖ್ಯವಾಗಿದೆ. ನ್ಯಾಯಾಲಯ ಸಂಕೀರ್ಣದಲ್ಲಿ ಮೂಲ ಸವಲತ್ತು ನಿರ್ಮಾಣಕ್ಕೆ ತಾವು ಬದ್ಧ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾ ನ್ಯಾಯಾಲಯ ಕ್ಯಾಂಪಸ್ ನಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಲ್ಲಿರುವ ಶಾಸಕರ ಅಭಿವೃದ್ಧಿ ಅನುದಾನದಲ್ಲಿ 1. 50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನಡೆಸಿ ಶಾಸಕರು ಮಾತನಾಡಿದರು.
ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯದಾನ ಮಾಡುವುದು ಅತ್ಯಂತ ಪವಿತ್ರ ಕೆಲಸ. ಇಂತಹ ಕೆಲಸ ನಡೆಯುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮೂಲ ಸವಲತ್ತು ಸದಾಕಾಲ ಚೊಕ್ಕವಾಗಿರಬೇಕು ಎಂಬುದೇ ತಮ್ಮ ಅಭಿಪ್ರಾಯವೆಂದರು.
ಇಲ್ಲಿನ ಜಿಲ್ಲಾ ನ್ಯಾಯವಾದಿಗಳ ಸಂಘದಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರ ಉಪಸ್ಥಿತಿಯಲ್ಲಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ಪಸಾರ್, ಉಪಾಧ್ಯಕ್ಷ ಭೀಮಾಶಂಕರ ಪೂಜಾರಿ, ಕಾರ್ಯದರ್ಶಿ ಎಸ್ಬಿ ವಾಡಿ, ಆರತಿ ರಾಠೋಡ, ಸುಧೀರ ಗಾದಗೆ, ಖಜಾಂಚಿ ಮಂಜುನಾಥ ಪಾಟೀಲ್ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.





