ಕಲಬುರಗಿ | ಫ.ಗು.ಹಳಕಟ್ಟಿಯವರ 146ನೇ ಜನ್ಮ ದಿನಾಚರಣೆ

ಕಲಬುರಗಿ: ವಚನಗಳನ್ನು ಸಂರಕ್ಷಣೆ ಮಾಡಿ ನಮಗೆ ಶರಣ ಸಾಹಿತ್ಯವನ್ನು ಓದಲು ಮಹತ್ವದ ಕಾರ್ಯ ಮಾಡಿದ ಡಾ.ಫ.ಗು. ಹಳ್ಳಕಟ್ಟಿ ಅವರು ಸೇವೆ ಅವಿಸ್ಮರಣೀಯ ಎಂದು ಕಲಬುರಗಿ ಚೇಂಬರ್ ಆಫ್ ಕಾರ್ಮಸ್‍ನ ಅಧ್ಯಕ್ಷ ಶರಣು ಪಪ್ಪಾ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಸುವರ್ಣ ಸಭಾ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಡಾ.ಫ.ಗು. ಹಳಕಟ್ಟಿಯವರ 146ನೇ ಜನ್ಮದಿನ ನಿಮಿತ್ತ "ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ" ಯ ಕಾರ್ಯಕ್ರಮದಲ್ಲಿ ಫ.ಗು ಹಲಕಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು.
ಕಲ್ಯಾಣದ ಕ್ರಾಂತಿಯಿಂದ ಚದುರಿ ಹೋದ ಶರಣರ ವಚನಗಳನ್ನು ಸಂರಕ್ಷಣೆ ಮಾಡಿ ಇಂದು ನಮಗೆ ನೀಡಿದ್ದಾರೆ. ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮಾದನ ಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವ ಪಾಟೀಲ ಜವಳಿ ಮಾತನಾಡಿ, ಕತ್ತಲೆಯಲ್ಲಿ ಕಳೆದು ಹೋಗಿದ್ದ ವಚನಗಳನ್ನು ಸಂರಕ್ಷಣೆ ಮಾಡಿ ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಿಯಾಗಬೇಕೆಂಬ ಕಾರಣಕ್ಕೆ ತಮ್ಮ ಇಡೀ ಬದುಕು ಸವೆಸಿದ ಫ.ಗು. ಹಳಕಟ್ಟಿಯವರು ಈ ನೆಲದ ಬೆಳಕ್ಕಾಗಿ ಈ ನೆಲದ ದಾರ್ಶನಿಕರಾಗಿ ಗಮನ ಸೆಳೆಯುತ್ತಾರೆ ಎಂದರು.
ರಾಷ್ಟ್ರಪತಿ ಪದಕ ಪುರಸ್ಕೃತರಾದ ಹಾಗೂ ನಿವೃತ್ತ ಡಿ.ವೈ.ಎಸ್.ಪಿ. ಸಮಿತಿ ಅಧ್ಯಕ್ಷರಾದ ಆರ್.ಸಿ.ಫಾಳೆ ಅವರು ಮಾತನಾಡಿದರು.
ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರು ರವಿಂದ್ರ ಶಾಹಬಾದಿ, ಜಿಲ್ಲಾಧಿಕಾರಿಗಳ ಕಚೇರಿ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಸಹಾಯಕ ನಿರ್ದೇಶಕ ಶಿವಶರಣಪ್ಪ ದನ್ನಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.
ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಕನ್ನಡದ ಭವನ ಸಾಂಸ್ಕೃತಿಕ ಮೆರವಣಿಗೆಯನ್ನು ಸಾಮಾಜಿಕ ಚಿಂತಕರಾದ ಜಾಹ್ನವಿ, ಶರಣಕುಮಾರ ಮೋದಿ ಚಾಲನೆ ನೀಡಿದರು.
ವೇದಿಕೆ ಮೇಲೆ ಜಿಲ್ಲಾಧಿಕಾರಿಗಳ ಶಿಷ್ಟಾಚಾರದ ತಹಶೀಲ್ದಾರ್ ಪಂಪಯ್ಯ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಗಡಿ, ಸಮಾಜದ ಮುಖಂಡರಾದ ಅಪ್ಪಾರಾವ ಅಕ್ಕೋಣೆ, ಶಿವಪುತ್ತಪ್ಪ ಭಾವಿ, ವಿನೋದಕುಮಾರ, ಜೇನವೇರಿ , ಶಿವಲಿಂಗಪ್ಪ ಅಷ್ಟಗಿ, ಡಾ.ಬಸವರಾ ಚೆನ್ನಾ ಸೇರಿದಂತೆ ಹಲವರು ಇದ್ದರು.







