Kalaburagi | ಪಟಾಕಿ ಎಂದು ಭಾವಿಸಿ ಮದ್ದಿಗೆ ಬೆಂಕಿ: ಸ್ಫೋಟದಲ್ಲಿ 15 ವರ್ಷದ ಬಾಲಕ ಮೃತ್ಯು

ಸಾಂದರ್ಭಿಕ ಚಿತ್ರ | Photo credit : AI
ಕಲಬುರಗಿ: ಪಟಾಕಿ ಎಂದು ಭಾವಿಸಿ ಕಾಡುಹಂದಿಗಳನ್ನು ಓಡಿಸಲು ತಂದಿಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ವರ್ಷದ ಬಾಲಕ ಮೃತಪಟ್ಟ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಭೀಮರಾಯ (15) ಎಂದು ಗುರುತಿಸಲಾಗಿದೆ. ಕಾಡುಹಂದಿಗಳನ್ನು ಓಡಿಸಲು ಬಾಲಕನ ತಂದೆ ಮನೆಯಲ್ಲಿ ಮದ್ದನ್ನು ತಂದು ಇಟ್ಟಿದ್ದರು. ಇದನ್ನು ದೀಪಾವಳಿ ಪಟಾಕಿ ಎಂದು ಭಾವಿಸಿದ ಭೀಮರಾಯ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಕ್ಷಣಾರ್ಧದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಬಾಲಕನ ಮುಖ ಹಾಗೂ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story




