ಕಲಬುರಗಿ | ಭಗವಾನ್ ಬಿರ್ಸಾ ಮುಂಡಾ 150ನೇ ಜಯಂತಿ

ಸಿಯುಕೆಯಲ್ಲಿ ಪ್ಲಾಂಟೇಶನ್ ಡ್ರೈವ್
ಕಲಬುರಗಿ: ಜನಜಾತಿಯ ಗೌರವ ವರ್ಷ–2025 ಹಾಗೂ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಆಳಂದ ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪ್ಲಾಂಟೇಶನ್ ಡ್ರೈವ್ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಸಿಯನ್ನು ನೆಟ್ಟು, ಪರಿಸರ ಸಂರಕ್ಷಣೆಯ ಮಹತ್ವವನ್ನು ಬಹುವಿಸ್ತಾರವಾಗಿ ಪ್ರಸ್ತಾಪಿಸಿದರು.
ಅವರು ಭಗವಾನ್ ಬಿರ್ಸಾ ಮುಂಡಾ ಅವರ ಕೊಡುಗೆಗಳು, ಬುಡಕಟ್ಟು ಸಮುದಾಯದ ಹಿತಕ್ಕಾಗಿ ನಡೆಸಿದ ಹೋರಾಟ ಹಾಗೂ ಅವರ ಬಾಳು ತತ್ವಗಳನ್ನು ಸ್ಮರಿಸಿದರು. ಮರದ ಮಹತ್ವ ಹಾಗೂ ಅದರ ಪರಿಸರದ ಮೇಲಿನ ಸಕಾರಾತ್ಮಕ ಪರಿಣಾಮವನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಡಾ.ಗುರು ಭಾಗೇವಾಡಿ ಸ್ವಾಗತಿಸಿದರು, ಡಾ.ಡಿ.ಗೌತಮ್ ವಂದಿಸಿದರು. ಪ್ರೊ.ಜಿ.ಆರ್.ಅಂಗಡಿ, ಡಾ.ಮಹೇಂದರ್ ಜಿ, ಡಾ.ಜಗದೀಶ್ ಬಿರಾದಾರ್, ಡಾ.ಆಶಾಲತ್ ಎಸ್ ಹಾಗೂ ಡಾ.ಆರ್.ಬಿ.ಬೋನಾಲ ಉಪಸ್ಥಿತರಿದ್ದರು.
Next Story





