ಕಲಬುರಗಿ | ಶ್ರೀನಿವಾಸ ಸರಡಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅರುಣ ಗೋನಾಯಕ, ಉಪಾಧ್ಯಕ್ಷರಾಗಿ ಭೀಮಣ್ಣ ರದ್ದಡಗಿ ಅವಿರೋಧ ಆಯ್ಕೆ

ಕಲಬುರಗಿ : ತಾಲೂಕಿನ ಶ್ರೀನಿವಾಸ ಸರಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅರುಣ ಗೋನಾಯಕ, ಉಪಾಧ್ಯಕ್ಷರಾಗಿ ಭೀಮಣ್ಣ ರದ್ದಡಗಿ ಅವಿರೋಧವಾಗಿ ಆಯ್ಕೆಯಾದರು.
ಶ್ರೀನಿವಾಸ ಸರಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಎಲ್ಲರ ಒಪ್ಪುಗೆ ಮೇರೆಗೆ ಮುಂದಿನ ಐದು ವರ್ಷಗಳ ಅವಧಿಗೆ ಎಲ್ಲ ಹುದ್ದೆಗೂ ಅವಿರೋಧ ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ರೇವಯ್ಯ ಮಠಪತಿ, ಅಶೋಕ ಬಿ.ಪಾಟೀಲ್, ಧರ್ಮರಾವ್ ಅತಿಥಿ, ಉಮೇಶ ಗಿರೆಪ್ಪಗೋಳ, ಸಂತೋಷ ಗಂಗಾಣಿ, ಅಶೋಕ ಬೆರ್ಜಿ, ಶಿವಶರಣಪ್ಪ ಮೀಸಿ, ರಜಾಕ್ಮಿಯಾ ಮುಲ್ಲಾ, ಕಲಾವತಿ ಎಂ.ಶ್ರೀಮನಿ, ಜಮಕಾಬಾಯಿ ಆಡೆ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ಸರಡಗಿ ಪಿಕೆಪಿಎಸ್ ಪದಾಧಿಕಾರಿಗಳನ್ನು ಯುವ ನಾಯಕ ಚೇತನಗೌಡ ಗೋನಾಯಕ ಅವರು ಸನ್ಮಾನಿಸಿ ಅಭಿನಂದಿಸಿದರು. ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಕಲ್ಯಾಣರಾವ ಮೂಲಗೆ ಸೇರಿದಂತೆ ಗ್ರಾಮಸ್ಥರು ಇದ್ದರು.
Next Story







