ಕಲಬುರಗಿ | ಕಳ್ಳತನವಾದ ಮಂಗಳಸೂತ್ರ ಪತ್ತೆಹಚ್ಚಿ ಮರಳಿಸಿದ ಬಸ್ ನಿರ್ವಾಹಕನಿಗೆ ಸನ್ಮಾನ, ಪ್ರಶಂಸನಾ ಪತ್ರ ವಿತರಣೆ

ಕಲಬುರಗಿ : ದೇವಲ ಗಣಗಾಪೂರಕ್ಕೆ ಮಾಘ ಉತ್ಸವ ಪ್ರಯುಕ್ತ ದತ್ತಾತ್ರೇಯ ದರ್ಶನಕ್ಕೆ ಎಂದು ಬಂದು ಬಸ್ ನಲ್ಲಿ ಪ್ರಯಾಣಿ ಮಾಡುವ ಸಮಯದಲ್ಲಿ ತೆಲಂಗಾಣ ಮೂಲಕ ಮಹಿಳಾ ಪ್ರಯಾಣಿಕರ ಚಿನ್ನದ ಮಂಗಳಸೂತ್ರ ಕಳ್ಳತನ ಮಾಡಿದ ಮಹಿಳೆಯನ್ನು ಪತ್ತೆ ಹಚ್ಚಿ ಕಳೆದುಕೊಂಡ ಮಹಿಳೆಗೆ ಮರಳಿ ಮಂಗಳಸೂತ್ರ ನೀಡಿ ಮಾನವೀಯತೆ ಮೆರೆದ ಕಲಬುರಗಿ ಘಟಕ-3ರ ನಿರ್ವಾಹಕ ಗಂಗಾರಾಮ ಇವರಿಗೆ ಕಲಬುರಗಿ ಘಟಕ 2 ವತಿಯಿಂದ ಕಲಬುರಗಿ ವಿಭಾಗ-2 ರ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ ಮತ್ತು ಕಲಬುರಗಿ ಘಟಕ-3 ಘಟಕ ವ್ಯವಸ್ಥಾಪಕ ರವೀಂದ್ರಕುಮಾರ ಅವರು ಕಚೇರಿಯಲ್ಲಿ ಬುಧವಾರ ಸಿಹಿ ತಿನಿಸಿ ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಪ್ರಶಂಸನಾ ಪತ್ರ ವಿತರಿಸಲಾಯಿತು.
ಬಸ್ ನಿರ್ವಾಹಕ ಗಂಗಾರಾಮ ಅವರು ನಿಗಮದ ಇತರೆ ಚಾಲಕ/ ನಿರ್ವಾಹಕರಿಗೆ ಮಾದರಿಯಾಗಿ ಅವರು ಸಹ ಪ್ರಾಮಾಣಿಕತೆಯಿಂದ ಮೆರೆದಿದ್ದಾರೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
Next Story







