ಕಲಬುರಗಿ | ಮನೆ ಕೊಡಿಸುವುದಾಗಿ ಮಹಿಳೆಗೆ ಗ್ರಾ.ಪಂ ಸದಸ್ಯನಿಂದ ಲೈಂಗಿಕ ಕಿರುಕುಳ ಆರೋಪ : ಪ್ರಕರಣ ದಾಖಲು

ಕಲಬುರಗಿ : ಗ್ರಾಮ ಪಂಚಾಯತ್ ವತಿಯಿಂದ ಮನೆ ಕೊಡಿಸುವುದಾಗಿ ಗ್ರಾಮ ಪಂಚಾಯತ್ ಸದಸ್ಯನೋರ್ವ ಮಹಿಳೆಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಳಸಾಪುರ ತಾಂಡದ ಗ್ರಾಮ ಪಂಚಾಯತ್ ಸದಸ್ಯ ನೀಲಕಂಠ ಮಾನಸಿಂಗ್ ರಾಠೋಡ್ ಕಿರುಕುಳ ನೀಡಿದ ಆರೋಪಿ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಮನೆ ಕೊಡಿಸುವುದಾಗಿ ಹೇಳಿ ಹಣದ ಬೇಡಿಕೆ ಇಟ್ಟು, ನಂತರ ಮಹಿಳೆಗೆ ಕರೆ ಮಾಡಿ ಲೈಂಗಿಕ ಪ್ರಚೋದನೆ ನೀಡಿರುವುದಾಗಿ ನೊಂದ ಮಹಿಳೆ ಪೊಲೀಸ್ ಠಾಣೆಗೆ ನೀಡಿದ ದೂರುನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಕಮಲಾಪುರ ಪೊಲೀಸರು ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Next Story