ಕಲಬುರಗಿ | ಭಾರೀ ಮಳೆಗೆ ಕೊಚ್ಚಿಹೋದ ಜಾನುವಾರುಗಳು

ಕಲಬುರಗಿ: ಜಿಲ್ಲಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಹಲವೆಡೆ ಜನರ ಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಇದರ ನಡುವೆ ಜಾನುವಾರುಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಕಮಲಾಪುರ ತಾಲೂಕಿನ ಕುದಮೂಡ ಗ್ರಾಮದಲ್ಲಿ ನಡೆದಿದೆ.
ಕುದಮೂಡ ಗ್ರಾಮದ ಸೇತುವೆಯ ಮೇಲಿಂದ ರೈತರು ಜಾನುವಾರುಗಳನ್ನು ಹೊಲಕ್ಕೆ ಕರೆದುಕೊಂಡು ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಹಲವು ಕಡೆಗಳಲ್ಲಿ ಮನೆ ಗೋಡೆ, ಮೇಲ್ಛಾವಣಿಗಳು ಕುಸಿದು ಅಪಾರ ಹಾನಿಯಾದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
Next Story





