ಕಲಬುರಗಿ | ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಬಸಪ್ಪ ಕುಂಬಾರ ಶೆಟ್ಟಿಕೇರಾ ಅವರಿಗೆ ʼಕೇಂದ್ರ ಗೃಹ ಸಚಿವರ ಪದಕʼ ಪ್ರದಾನ

ಕಲಬುರಗಿ: ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಸಿಬ್ಬಂದಿ ಬಸಪ್ಪ ಎ.ಕುಂಬಾರ ಶೇಟ್ಟಿಕೆರಾ ಅವರಿಗೆ ಪೊಲೀಸ್ ತರಬೇತಿಯಲ್ಲಿ ತೋರಿದ ಪರಿಣಾಮಕಾರಿ ಕರ್ತವ್ಯ ಮತ್ತು ದಕ್ಷತೆಗಾಗಿ ಕೇಂದ್ರ ಗೃಹ ಸಚಿವರ ಪದಕ (ಯೂನಿಯನ್ ಹೋಂ ಮಿನಿಸ್ಟರ್ ಮೇಡಲ್ ಫಾರ್ ಎಕ್ಸಲೆನ್ಸ್ ಇನ್ ಪೊಲೀಸ್ ಟ್ರೇನಿಂಗ್) ನೀಡಲಾಯಿತು .
ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 'ಕೇಂದ್ರ ಗೃಹ ಸಚಿವರ ಪದಕ' ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.
ಬಸಪ್ಪ ಎ.ಕುಂಬಾರ ಶೆಟ್ಟಿಕೇರಾ ಅವರಿಗೆ ಭಾರತ ಸರಕಾರದ ಗೃಹ ಸಚಿವಾಲಯದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ 2021-2022ನೇ ಸಾಲಿನ “ಕೇಂದ್ರ ಗೃಹ ಸಚಿವರ ಪದಕ” ಲಭಿಸಿರುವುದಕ್ಕೆ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯ ಪೊಲೀಸ್ ಅಧೀಕ್ಷಕರು ಮತ್ತು ಪ್ರಾಂಶುಪಾಲರಾದ ಡೆಕ್ಕಾ ಕಿಶೋರ್ ಬಾಬು, ಡಿಎಸ್ಪಿ ಶಿವಾನಂದ,ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಿನಾಥ ಬಿ.ಪಿ,ಆರ್., ಪಿ.ಐಗಳಾದ ಚನ್ನಬಸು, ಪಾರ್ಶ್ವನಾಥ, ಪಿಎಸ್‌ಐಗಳಾದ ಸಂಗೀತಾ, ಯಲ್ಲಮ್ಮ ಹಾಗೂ ಜಯಭೀಮ್, ಹೆಚ್.ಸಿ, ಕಿಷ್ಠಪ್ಪ ಶಾಸಮೋಳ, ರಮೇಶ, ಶಿವಾನಂದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.







