ಕಲಬುರಗಿ | ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್, ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಗೋದೂತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ABRSM) ವತಿಯಿಂದ ರಾಣಿ ಅಬ್ಬಕ್ಕ ದೇವಿರವರ 500ನೇ ಜನ್ಮ ಶತಾಬ್ದಿ, ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ದಿನಾಚರಣೆ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ರವರ 200ನೇ ಜಯಂತೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು.
ಎಬಿಆರ್‌ಎಸ್‌ಎಂನೊಂದಿಗೆ ಸಂಲಗ್ನತೆ ಹೊಂದಿರುವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಬಿರಾದಾರ್ ತಮ್ಮ ಉಪನ್ಯಾಸದಲ್ಲಿ, ಈ ಮೂವರು ರಾಣಿಯರು ಅವರು ಮಾಡಿದ ಸಾಧನೆ ಅವರ ಹೋರಾಟಗಳು ಇಂದಿನ ಮಹಿಳೆಯರಿಗೆ ಪ್ರೇರಣದಾಯಿಯಾಗುತ್ತಾರೆ. ವಿದ್ಯಾರ್ಥಿನಿಯರು ಇಂತಹ ಮಹಾನ್ ವೀರರಾಣಿಯರನ್ನು ತಮ್ಮ ಜೀವನದ ಆದರ್ಶರನ್ನಾಗಿ ಇಟ್ಟುಕೊಂಡು ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಪ್ರೆರೇಪಿಸಿದರು.
500 ವರ್ಷಗಳ ಹಿಂದೆಯೇ ತುಳು ನಾಡಿನಲ್ಲಿ ಅಬ್ಬಕ್ಕದೇವಿ ಪೋರ್ಚುಗಿಸರಿಗೆ ಸಿಂಹ ಸಪ್ನವಾಗಿದ್ದ ರಾಣಿ ಅಬ್ಬಕ್ಕ " ಅಭಯ ರಾಣಿ " ಎಂದೇ ಹೆಸರುವಾಸಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಗೊದುತಾಯಿ ಇಂಜಿನಿಯರಿಂಗ್ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಚೆರ್ ಪರ್ಸನ್ ಡಾ.ಜಯಸುಧಾ, ಗಣಿತ ವಿಭಾಗದ ಮುಖ್ಯಸ್ಥರು ಡಾ.ಸ್ವಾತಿ ಕಲಶೆಟ್ಟಿ ವೇದಿಯಲ್ಲಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.





