ಕಲಬುರಗಿ | ನಿಜಶರಣ ಅಂಬಿಗರ ಚೌಡಯ್ಯ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ : ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಶ್ಲೀಲವಾಗಿ ಜೋಡಣೆ ಮಾಡಿ ಸಾಮಾಜಿಕ ಜಾಲತಣಗಳಲ್ಲಿ ಹರಿಬಿಟ್ಟಿರುವ ಕಿಡಿಗೆಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಟೈಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬಿಗರ ಚೌಡಯ್ಯ ದೇವಾಲಯದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತದ ಮುಖಾಂತರ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ಮಾಡಿ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿದರು.
ಸಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ನಲ್ಲಿ ಶ್ರೀ ಅಂಬಿಗರ ಚೌಡಯ್ಯ ನವರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳನ್ನ ಅಶ್ಲೀಲವಾಗಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಇಂತಹ ಮನಸ್ಥಿಯವರನ್ನು ಪೊಲೀಸ್ ಇಲಾಖೆಯವರು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನೀಗ ವಹಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಿಮರಾಯ ಜನಿವಾರ, ಮಲ್ಲೆಶಿಗೌಡ ರೇವನೂರ, ಭಾಗೇಶ ಹೋತಿನಮಡು, ಗಿರೀಶ್ ತುಂಬಗಿ, ಮರೆಪ್ಪ ಕೊಳಕೂರ, ದೇವಿಂದ್ರ ಚಿಗ್ರಳ್ಳಿ, ಸಂತೋಷ ಜೈನಾಪೂರ, ಗುರು ಜೈನಾಪೂರ, ನಾಗರಾಜ ವಿ ಟಿ, ರಾಜು ತಳವಾರ, ರಾಚಣ್ಣ ತಳವಾರ, ಕಾಂತಪ್ಪ ಚನ್ನೂರ, ಸಿದ್ದಣ್ಣಗೌಡ ಮಾವನೂರ, ನಿಂಗಪ್ಪ ದೇವಣಗಾಂವ್, ವೀರೇಶ ದೊಡ್ಮನಿ, ಭೀಮರಾಯ ತಳವಾರ, ಮಲ್ಲಿಕಾರ್ಜುನ ನರಿಬೋಳ, ಭೀಮು ಆಂದೋಲ, ಹಣಮಂತರಾಯ ಪಾಟೀಲ್, ಬಸವರಾಜ ಜಂಬೇರಾಳ, ಶ್ರೀಮಂತ ಕರಕಳ್ಳಿ, ಭೀಮು ಖಾದ್ಯಪೂರ, ಅಮರ ಹಳ್ಳಿ, ನಾಗಣ್ಣಗೌಡ ರೇವನೂರ, ಗೋಲ್ಲಾಳಪ್ಪ ಅವರಾದ, ಮಲ್ಲಿಕಾರ್ಜುನ ಚನ್ನೂರ, ಪ್ರಕಾಶ ತಳವಾರ ಸೇರಿದಂತೆ ಅನೇಕರಿದ್ದರು.







