Kalaburagi | ಶರಣಬಸವ ವಿವಿಯ 24 ವಿದ್ಯಾರ್ಥಿನಿಯರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ

ಕಲಬುರಗಿ : ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಸಿಎ (ಮಹಿಳೆಯರಿಗೆ ಮಾತ್ರ) ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 24 ವಿದ್ಯಾರ್ಥಿನಿಯರು ವಿವಿಧ ಪ್ರತಿಷ್ಠಿತ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 2 ಲಕ್ಷ ರೂ.ಗಳಿಂದ 6.2 ಲಕ್ಷ ರೂ.ವರೆಗಿನ ವೇತನದ ಪ್ಯಾಕೇಜ್ ದೊರೆತಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ತಿಳಿಸಿದ್ದಾರೆ.
ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಐವರು ವಿದ್ಯಾರ್ಥಿನಿಯರು ಬೆಂಗಳೂರಿನ ಗ್ಲೋಲಾಜಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವಾರ್ಷಿಕ 6.2 ಲಕ್ಷ ರೂ. ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಗ್ರಾಡ್‌ಗುರು ಇನ್ನೋವೇಷನ್ಸ್ ಕಂಪನಿಯಲ್ಲಿ ತಲಾ ವಾರ್ಷಿಕ 6 ಲಕ್ಷ ರೂ. ವೇತನದೊಂದಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಡಿಜಿಸ್ನೇರ್ ಟೆಕ್ನಾಲಜಿ ಮತ್ತು ಲಾಹೋಟಿ ಮೋಟಾರ್ಸ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಇನ್ನೂ 17 ವಿದ್ಯಾರ್ಥಿನಿಯರು ವಾರ್ಷಿಕ 2 ಲಕ್ಷ ರೂ.ಗಳಿಂದ 3.6 ಲಕ್ಷ ರೂ.ವರೆಗಿನ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಗ್ಲೋಲಾಜಿಕ್ಸ್ ಸೊಲ್ಯೂಷನ್ಸ್ ಕಂಪನಿಗೆ ಪ್ರಣೀತಾ, ನಾಗವೇಣಿ ಹುಲಿಮನಿ, ಅಂಕಿತಾ ಸಿ.ಕೆ., ಶಿವಾನಿ ಹಾಗೂ ರುಶಾನಾ ತಹ್ರೀನ್ ಅವರು ತಲಾ ವಾರ್ಷಿಕ 6.2 ಲಕ್ಷ ರೂ. ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಗ್ರಾಡ್‌ಗುರು ಇನ್ನೋವೇಷನ್ಸ್ ಕಂಪನಿಗೆ ಶಿಲ್ಪಾ ಕಲಶೆಟ್ಟಿ ಮತ್ತು ಶ್ರೀದೇವಿ ಅವರು ತಲಾ ವಾರ್ಷಿಕ 6 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ ಎಂದು ಪ್ರೊ. ಬಿಡವೆ ಮಾಹಿತಿ ನೀಡಿದ್ದಾರೆ.
ಸೃಷ್ಟಿ (ಗ್ಲೋಲಾಜಿಸ್ಟಿಕ್ಸ್ ಸೊಲ್ಯೂಷನ್ಸ್), ದೀಪಿಕಾ ಬಿರಾದಾರ, ನಿಹಾರಿಕಾ ಹಾಗೂ ಪೂರ್ವಿ ಕುಲಕರ್ಣಿ (ಡಿಜಿಸ್ನೇರ್ ಟೆಕ್ನಾಲಜಿ), ಭಾಗ್ಯಶ್ರೀ ನಾವದಗಿ, ಬನಶ್ರೀ, ವಿದ್ಯಾಶ್ರೀ ಅನಶೆಟ್ಟಿ, ಅನಿತಾ, ಯಶಸ್ವಿನಿ, ಪಲ್ಲವಿ ರಾಠೋಡ್, ಈಶ್ವರಿ ರಾಜಪೂತ್, ಸಾಕ್ಷಿ ಶಿವಾನಂದ, ಸಮ್ರೀನ್, ಸೌಮ್ಯ ಕಾಡಾದಿ, ರೇಣುಕಾ ಮೊಳಕೇರಿ, ಪ್ರಿಯಾಂಕಾ ಮದ್ದೂರ ಹಾಗೂ ಶೋಭಾ ಅಫಜಲಪುರಕರ (ಲಾಹೋಟಿ ಮೋಟಾರ್ಸ್) ಅವರು ವಾರ್ಷಿಕ 2 ಲಕ್ಷ ರೂ.ಗಳಿಂದ 3.6 ಲಕ್ಷ ರೂ.ವರೆಗಿನ ವೇತನದೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮಿ ಪಾಟೀಲ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ ಹಾಗೂ ಡೀನ್ ಡಾ. ಶಿವಕುಮಾರ ಜವಳಿಗಿ ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಎ ವಿಭಾಗದ ಬೋಧಕ ವರ್ಗದವರ ಕಾರ್ಯವನ್ನೂ ಶ್ಲಾಘಿಸಿದ್ದಾರೆ.






