ಕಲಬುರಗಿ | 4.25 ಲಕ್ಷ ರೂ. ಮೌಲ್ಯದ 25 ಮೊಬೈಲ್‌ಗಳು ಪತ್ತೆ : ವಾರಸುದಾರರಿಗೆ ಹಸ್ತಾಂತರ

ಕಲಬುರಗಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ, ಮರೆತುಹೋದ ಹಾಗೂ ಕಾಣೆಯಾದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಒಟ್ಟು 25 ಮೊಬೈಲ್‌ಗಳು, ಅಂದಾಜು 4,25,000 ರೂ. ಮೌಲ್ಯದ ಮೊಬೈಲ್ ಗಳನ್ನು CEIR ತಂತ್ರಾಂಶ ಸಹಾಯದಿಂದ ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಲಬುರಗಿ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣವರು ಮಾಲಕರಿಗೆ ಮೊಬೈಲ್ ಹಸ್ತಾಂತರ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





