ಕಲಬುರಗಿ | ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 2,513 ಪ್ರಕರಣ ಸಂಧಾನದ ಮೂಲಕ ಇತ್ಯರ್ಥ
ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ರಾಷ್ಟ್ರೀಯ ಲೋಕ ಅದಾಲತ್ ಪರಿಣಾಮಕಾರಿ : ನ್ಯಾ.ಸುಮನ್ ಚಿತ್ತರಗಿ

ಕಲಬುರಗಿ: ಆಳಂದ ಪಟ್ಟಣದ ಕಿರಿಯ ಶ್ರೇಣಿ ಮತ್ತು ಹೆಚ್ಚುವರಿ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶೆ ಸುಮನ್ ಚಿತ್ತರಗಿ ಅವರು ರಾಜಿ ಸಂಧಾನದ ಮೂಲಕ ಹಲವಾರು ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿದ್ದಾರೆ.
ಕಿರಿಯ ಶ್ರೇಣಿ ಹಾಗೂ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಲೋಕ ಅದಾಲತ ಮುಂದೆ 2,878 ರಾಜಿಸಂಧಾನಕ್ಕೆ ಬಂದಿದ್ದವು. ಸಿವಿಲ್, ರಾಜಿಯಾಗಬಲ್ಲ ಕ್ರಿಮಿನಲ್ ಸ್ವರೂಪದ ಪ್ರಕರಣಗಳು ಮೆಂಟೆನೆನಸ್ಸ್ ಪ್ರಕರಣಗಳು ಒಳಗೊಂಡು 2,513 ಪ್ರಕರಣಗಳು ಸ್ಥಳದಲ್ಲೇ ಅವರು ಇತ್ಯರ್ಥಗೊಳಿಸಿದ್ದಾರೆ.
ಈ ಲೋಕದಾಲತ್ ನಲ್ಲಿ ಕಕ್ಷಿದಾರರಿಗೆ ರಾಜಿ ಸಂಧಾನದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ, ಸಾಮರಸ್ಯದಿಂದ ಪರಿಹಾರ ಕಂಡುಕೊಳ್ಳಲು ಪ್ರೋತ್ಸಾಹಿಸಿದ ಅವರು, ನ್ಯಾಯ ವಿತರಣೆಯಲ್ಲಿ ರಾಜಿ ಸಂಧಾನದ ಪಾತ್ರದ ಬಗ್ಗೆ ಮಹತ್ವದ ಅಂಶಗಳನ್ನು ಸ್ಪಷ್ಟಪಡಿಸಿದರು.
ಈ ವೇಳೆ ನ್ಯಾ.ಸುಮನ್ ಚಿತ್ತರಗಿ ಅವರು ಮಾತನಾಡಿದರು.
ಈ ರಾಷ್ಟ್ರೀಯ ಲೋಕದಾಲತ್ ನ ಯಶಸ್ಸಿಗೆ ಜಿಲ್ಲಾ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ನ ಸದಸ್ಯರು, ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಕಮಲ ರಾಠೋಡ, ಕಾರ್ಯದರ್ಶಿ ಬಿ.ಟಿ.ಸಿಂಧೆ, ಸಹಾಯಕ ಆಡಳಿತಾಧಿಕಾರಿ ಬಸಣ್ಣಪ್ಪ ಗುಡ್ಡೆವಾಡಿ ಇತರ ನ್ಯಾಯಾಲಯದ ಸಿಬ್ಬಂದಿಗಳು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರು, ಕಕ್ಷಿದಾರರು ಮತ್ತು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.







