ಕಲಬುರಗಿ | ಫೆ.1ರಿಂದ 31ನೇ ವಾರ್ಷಿಕ ಸುನ್ನಿ ಇಜ್ತೆಮಾ

ಕಲಬುರಗಿ : ಸುನ್ನಿ ದಾವತ್ ಇ ಇಸ್ಲಾಮಿ ಏಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.1 ರಿಂದ ಎರಡು ದಿನಗಳವರೆಗೆ ಇಲ್ಲಿನ ರಿಂಗ್ ರಸ್ತೆಯ ವಾದಿ ಇ ಬಂದಾ ನವಾಜ್ ಹಜರತ್ ಪೀರ ಬಂಗಾಳಿ ದರ್ಗಾದಲ್ಲಿ ಸುನ್ನಿ ದಾವತ್ ಇ ಇಸ್ಲಾಮಿಯ ಇದರ 31ನೇ ವಾರ್ಷಿಕ ಸುನ್ನಿ ಇಜ್ತಿಮಾ ಸಮಾರಂಭ ನಡೆಯಲಿದೆ ಎಂದು ನಿಗ್ರಾನ ಸುನಿ ದಾವತ್ ಇಸ್ಲಾಮಿ ಅಧ್ಯಕ್ಷ ಹಾಫಿಸ್ ಸೈಯದ್ ಅಜರ್ ಅಲಿ ತಿಳಿಸಿದರು.
ಹಜರತ್ ಪೀರ್ ಬಂಗಾಳಿ ದರ್ಗಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳಿಂದ ಗಣ್ಯ ಉಲಮಾ, ಪೀಠಾಧಿಪತಿಗಳು ಮತ್ತು ಸುನ್ನಿ ದಾವತ್-e-ಇಸ್ಲಾಮಿಯ ಪ್ರವಚಕರು ಭಾಗವಹಿಸುವ ನಿರೀಕ್ಷಿಸಲಾಗಿದೆ.
ಫೆ.1ರಂದು ಮಧ್ಯಾಹ್ನ ನಮಾಜ್ ನಂತರ ರಾತ್ರಿ 9 ಗಂಟೆಯವರೆಗೆ ಮಹಿಳೆಯರಿಗಾಗಿ ಮೀಸಲಾಗಿದ್ದು, ಫೆ.2 ರಂದು ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಪುರುಷರಿಗಾಗಿ ನಿರ್ದಿಷ್ಟಪಡಿಸಲಾಗಿದೆ. ದೇಶದ ಪ್ರಮುಖ ಉಲಮಾ ಮತ್ತು ಪುಭಾವಿ ವಕ್ತಾರರಾದ ಆಧುನಿಕ ಇಸ್ಲಾಮಿಕ್ ಕಾನೂನು ತಜ್ಞ ಮೌಲಾನಾ ಮುಫ್ರಿ ನಿಜಾಮುದ್ದೀನ್ ರಿಜ್ಜಿ ಸಾಹೇಬ್, ಮುಂಬೈನ ಅಲ್ಲಾಮಾ ಹಾಫಿಝ್ ಮತ್ತು ಕಾರಿ ಶಾಕಿರ್ ಅಲಿ ನೂರಿ ಬರ್ಕಾತಿ ಸಾಹೇಬ್, ಮುಂಬೈನ ಕಾರಿ ಮೊಹಮ್ಮದ್ ರಿಜ್ವಾನ್ ಖಾನ್ ಸಾಹೇಬ್, ಅಲ್ಲಾಮಾ ಸೈಯದ್ ಮೊಹಮ್ಮದ್ ಅಮೀನ್ ಖಾದ್ರಿ ಸಾಹೇಬ್, ಮುಂಬೈನ ಶೂರಾ ಕೌನ್ಸಿಲ್ ಸದಸ್ಯ ಹಾಜಿ ಮೊಹಮ್ಮದ್ ಖಾಲಿದ್ ರಿಜ್ಜಿ ಸಾಹೇಬ್, ಮೌಲಾನಾ ಮೊಹಮ್ಮದ್ ಮೂಸಾ ರಿಜಿ ಸಾಹೇಬ್, ಹಾಜಿ ಸೈಯದ್ ಮೊಹಮ್ಮದ್ ಸಾಹೇಬ್ ಅನೇಕರು ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಖುರಾನ್ ಕಂಠಪಾಠ ಮಾಡಿದ 5 ಉಲಮಾಗಳಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, 11 ಮಹಿಳಾ ಉಲಮಾಗಳಿಗೆ ಗೌರವ ಸತ್ಕಾರ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹ್ಮದ್ ಜಿಶಾನ್ ನಜಿಮಿ, ಮುಪ್ತಿ ಅಬ್ದುಲ್ರಜಾಖ ಸದರ್, ಮೌಲಾನಾ ಮಹ್ಮದ್ ಜಾವೀದ್ ಅಖ್ತರ್, ಕಲಂನೂರಿ ಹಮೀದರಜಾ ಮತ್ತಿತರರಿದ್ದರು.







