ಕಲಬುರಗಿ | ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.50 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ನಿರೀಕ್ಷಕಿ ಅರ್ಚನಾ ಕಟ್ಟಿಮನಿ ಮತ್ತು ಸಬ್ ಅರ್ಬನ್ ಠಾಣೆಯ ಸಿಬ್ಬಂದಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿ ಆಳಂದ ರಸ್ತೆಯ ವಿಶ್ವರಾಧ್ಯ ಗುಡಿ ಬಳಿ 1.50 ಲಕ್ಷ ರೂ. ಮೌಲ್ಯದ 4,420 ಕೆಜಿ ಅಕ್ಕಿ ಮತ್ತು ಲಾರಿಯನ್ನು ಜಪ್ತಿ ಮಾಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಅಣ್ಣಾರಾವ ಬಿರಾದಾರ ಬಂಧಿತ ಚಾಲಕ. ಈತ ಕಾಂತು ಅಲಿಯಾಸ್ ಕಂಟೆಪ್ಪ ಸಿರಸಗಿ ಎಂಬಾತನಿoದ ಲಾರಿಯಲ್ಲಿ ಅಕ್ಕಿ ತುಂಬಿಕೊoಡು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬoಧಿಸಿದoತೆ ಲಾರಿ ಚಾಲಕ ಅಣ್ಣಾರಾವ ಬಿರಾದಾರ, ಲಾರಿ ಮಾಲಕ ಗುರುದೇವ ಮತ್ತು ಅಕ್ಕಿಯ ಮಾಲಕ ಕಾಂತು ಅಲಿಯಾಸ್ ಕಂಟೆಪ್ಪಾ ಸಿರಸಗಿ ವಿರುದ್ಧ ಸಬ್ ಅರ್ಬನ್ ಠಾಣೆಯಲ್ಲಿ ಆಹಾರ ನಿರೀಕ್ಷಕಿ ಅರ್ಚನಾ ಕಟ್ಟಿಮನಿ ದೂರು ನೀಡಿದ್ದಾರೆ.
Next Story





