ಕಲಬುರಗಿ | ಕರುನಾಡ ವಿಜಯ ಸೇನೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕಲಬುರಗಿ: ಕರುನಾಡ ವಿಜಯ ಸೇನೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ನಗರದ ಪಿಡಿಎ ಕಾಲೇಜು ಮುಂಭಾಗದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖಂಡ ರಮೇಶ್ ಎಚ್.ವಾಡೇಕರ್ ಮತ್ತು ಕರುನಾಡ ವಿಜಯ ಸೇನೆಯ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ ಎಸ್.ರಾಂಪುರ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಪೃಥ್ವಿರಾಜ ಅವರು, ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡುತಾಯಿ ಭುವನೇಶ್ವರಿಯ ನಾಡು ಎಂದೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಕನ್ನಡ ನಾಡಿಗೆ ಒಂದು ಧೀಮಂತ ಶಕ್ತಿ ಇದೆ. ನಾವು ಕೇವಲ ನವೆಂರ್ ತಿಂಗಳಲ್ಲಿ ಕನ್ನಡಿಗರ ಆಗದೆ ಕನ್ನಡ ನಾಡಿನ ಜವಾಬ್ದಾರಿತ ಪ್ರಜೆಯಾಗಿ ಅನ್ಯ ಭಾಷಿಗರ ಜೊತೆ ಕನ್ನಡದಲ್ಲಿ ವ್ಯವಹರಿಸುವುದು, ನಾಡು ನುಡಿ ಸಂಸ್ಕೃತಿಕ ಪರಂಪರೆ ಉಳಿಸಲು ದೃಢನಿರ್ಧಾರ ಮಾಡೋಣ, ಕನ್ನಡ ಭಾಷೆ ನೆಲ ಜಲ ನಮ್ಮ ಜನ್ಮಭೂಮಿ ಕನ್ನಡಕ್ಕೆ ಧಕ್ಕೆ ಬಂದಾಗ ಹಾಗೂ ಕನ್ನಡಿಗರಿಗೆ ದಕ್ಕೆ ಬಂದಾಗ ನಾವು ಹೋರಾಡಲು ಸದಾಕಾಲ ಸಿದ್ದರಾಗಬೇಕು. ಕನ್ನಡವನ್ನು ಕಟ್ಟೋಣ ಕನ್ನಡವನ್ನು ರಕ್ಷಿಸೋಣ ಎಂದರು.
ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷನಾಗರಾಜ ಮ್ಯಾತ್ರಿ, ತಾಲೂಕು ಅಧ್ಯಕ್ಷ ಕಲ್ಯಾಣಿತಳವಾರ್, ಚುಂಚಳ್ಳಿ ತಾಲೂಕು ಅಧ್ಯಕ್ಷ ಪವನ ಕಟ್ಟಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಶಿವಶಂಕರ್ ದೊಡ್ಮನಿ, ನಗರಾಧ್ಯಕ್ಷರಾಜು ಗುಂಟ್ರಳ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಳೆಸೂಗೂರ, ನಗರ 54ವಾರ್ಡ್ ಅಧ್ಯಕ್ಷ ಸಚಿನ್ ತಳವಾರ, ಸೈಬಣ್ಣ ಪರಸನಹಳ್ಳಿ, ಮೀನಜಗಿ ಗ್ರಾಮ ಘಟಕ ಅಧ್ಯಕ್ಷ ಅಂಬ್ರೆಶ್ ತಳವಾರ್, ಕೇದಾರನಾಥ್, ಮಲ್ಲು ಜಗತಿ, ಶಾಂತು, ರಾಜು ಗುಂಟ್ರಳ್ ಸೇರಿದಂತೆ ವಿಜಯಸೇನೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.







