ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿ ಅಧೀಕ್ಷಕಿ ಡಾ.ಅನಿತಾ ಆರ್. ಅವರು 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಆಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಯವರಿಗೆ 2024ನೇ ಸಾಲಿನಲ್ಲಿ ಈ ಸಂಸ್ಥೆಯ ದ್ವೀತೀಯ ದರ್ಜೆಯ ಸಹಾಯಕರಾದ ಬಿ.ಪಿ.ಕಾಳಿಂಗ ರವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.
ಧ್ವಜರೋಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕರಾದ ಎಂ.ಹೆಚ್ ಆಶೇಖಾನ್, ಸಹಾಯಕ ಅಧೀಕ್ಷಕರಾದ ಬಿ.ಸುರೇಶ್, ಚನ್ನಪ್ಪ ಯಟಗಾಲ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಕಚೇರಿ ಅಧೀಕ್ಷಕರಾದ ಗುರುಶೇಶ್ವರ ಆರ್.ಶಾಸ್ತ್ರಿ, ಸಂಸ್ಥೆಯ ಜೈಲರ್ ಗಳಾದ ಸುನಂದ, ವಿ.ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಶಾಮ ಬಿದ್ರಿ ಹಾಗೂ ಕಾರಾಗೃಹದ ಎಲ್ಲಾ ಕಾರ್ಯನಿರ್ವಾಹಕ ಮತ್ತು ಲಿಕಪಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಎಸ್.ಬಿ.ಐ. ಆಡಳಿತ ಕಚೇರಿ ವತಿಯಿಂದ ಸಿ.ಎಸ್.ಆರ್ ಚಟುವಟಿಕೆ ಅಡಿಯಲ್ಲಿ ಕೇಂದ್ರ ಕಾರಾಗೃಹ ಸಂಸ್ಥೆಗೆ ಲಿಂಬು, ಪೇರು, ನುಗ್ಗೆ ಗಿಡ ಮತ್ತು ಮಾವಿನ ಹಣ್ಣಿನ ಗಿಡಗಳು ಸೇರಿದಂತೆ ಒಟ್ಟು 300 ಸಂಖ್ಯೆಯ ಗಿಡಗಳನ್ನು ದೇಣಿಗೆಯ ರೂಪದಲ್ಲಿ ಕಾರಾಗೃಹದ ಕೃಷಿ ಜಮೀನಿನಲ್ಲಿ ನೀಡಲಾಯಿತು.
ಸಂಸ್ಥೆಗೆ 300 ಸಂಖ್ಯೆ ಗಿಡಗಳನ್ನು ದೇಣಿಗೆ ರೂಪದಲ್ಲಿ ನೀಡಿದಕ್ಕಾಗಿ ಇಲಾಖೆ ಹಾಗೂ ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಬಿ.ಐನ ಅಧಿಕಾರಿ/ಸಿಬ್ಬಂದಿಗಳಾದ ಸಿ.ಎಂ.ಸಂತೋಷ ಪಾಟೀಲ್, ಸಿ.ಎಂ.ಸುದೀಪ್ ಕುಮಾರ, ಸಿ.ಎಂ. ಗೌರವ ಗುಪ್ತ, ಶಾಖೆ ವ್ಯವಸ್ಥಾಪಕರಾದ ಅವಿನಾಶ್ ಹಾಗೂ ಕಚೇರಿ ಸಿಬ್ಬಂದಿಗಳಾದ ಶಶಿಕಾಂತ್ ನವೀನ್, ಸಾಗರ್, ಬಸವರಾಜ ಬಿರಾದಾರ, ಅಕ್ಷಯ್ಯ, ದಿನಕರ್ ಶಿವಾಜಿ ಕೆ. ಸಿಂದೆ ಮತ್ತು ಖದೀರ್, ನಾಗರಾಜ ಮೂಲಗೆ ಉಪಸ್ಥಿತರಿದ್ದರು.







