ಕಲಬುರಗಿ | 893ನೇ ಬಸವ ಜಯಂತಿ ಉತ್ಸವ : ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಮಾಕಾ ಲೇಔಟ್ ಜೇವರ್ಗಿ ಕಾಲೋನಿಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ (ರಿ) ವತಿಯಿಂದ 893ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಹಾಂತೇಶ ಕೊಣ್ಣೂರ ಅವರನ್ನು ಹಾಗೂ ಅಧ್ಯಕ್ಷರಾಗಿ ಡಾ.ಬಾಬುರಾವ ಶೇರಿಕಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ರವೀಂದ್ರ ಮಾಲಿ ಪಾಟೀಲ ಮತ್ತು ಕೋಶಾಧ್ಯಕ್ಷರಾಗಿ ಆದಪ್ಪ ಬಗಲಿ ಅವರನ್ನು ಸಹ ಆಯ್ಕೆ ಮಾಡಲಾಯಿತು.
ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಈ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಾಮಗೊಂಡ, ಶಿವಾನಂದ ಮಾಲಾಗತ್ತಿ, ನಾಗಣ್ಣ ಗೌಡ ಪಾಟೀಲ, ಶಿವಾನಂದ ದಾನಮಗುಡಿ, ಅಯ್ಯಣ್ಣ ನಂದಿ, ಹಣಮಂತರಾಯ ಐನಳ್ಳಿ, ಶಿವಕುಮಾರ ಧರ್ಮಗೊಂಡ, ಅಶೋಕ ಗೂಳಿ, ಸಂಗಮೇಶ, ಸಿದ್ದರಾಮ ವಾಲಿ, ನಾಗರಾಜ ಕಾಮಾ, ಸೂರ್ಯಕಾಂತ್ ಡುಮ್ಮ, ರಮೇಶ ಚೌಹಾಣ್, ಪ್ರಸನ್ ವಾಂಜರ ಖೇಡೆ, ಡಾ. ಸಂಜುಕುಮಾರ ಶಟಕಾರ್, ಚಂದ್ರಶೇಖರ ಅಂಕಲಿಗಿ, ರಾಜಶೇಖರ ಸಿನ್ನೂರ, ಬಸವರಾಜ ಮಡಿವಾಳ ಹಾಗೂ ಸತೀಶ ಸಜ್ಜನ ಉಪಸ್ಥಿತರಿದ್ದರು.





