ಕಲಬುರಗಿ | "ನಮ್ಮ ನಡೆ ಫಲಿತಾಂಶದ ಕಡೆ" ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ), ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಶಾಖೆ ಕಲಬುರಗಿ, ಉಪನ್ಯಾಸಕರ ಸಂಘ (ರಿ) ಶಾಖೆ ಕಲಬುರಗಿ ಹಾಗೂ ರಮಾಬಾಯಿ ಜಹಾಗೀರದಾರ ಸ್ವತಂತ್ರ ಪದವಿ ಪೂರ್ವ ಕಾಲೇಜು (ಆರ್.ಜೆ) ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿತ್ತು.
ಜೀವಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಫಲಿತಾಂಶ ಸುಧಾರಣೆಗಾಗಿ ನಡೆಸಿದ ಕಾರ್ಯಗಾರಕ್ಕೆ ಉದ್ಘಾಟಕರಾಗಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸುರೇಶ ಅಕ್ಕಣ್ಣ ಅವರು ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು ಫಲಿತಾಂಶಕ್ಕಾಗಿ ಉಪನ್ಯಾಸಕರಾದವರು ಕಾಲೇಜಿನ ಮಕ್ಕಳನ್ನು ನಮ್ಮ ಮಕ್ಕಳಂತೆ ಕಾಳಜಿ ವಹಿಸಬೇಕು. ಕಳೆದ ಸಾಲಿನಲ್ಲಿ 31ನೇ ಸ್ಥಾನದಲ್ಲಿ ಇದ್ದ ಕಲಬುರಗಿ ಜಿಲ್ಲೆ 13ನೇ ಸ್ಥಾನಕ್ಕೆ ತರುವಂತೆ ಪ್ರಯತ್ನಿಸಿ 10ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ಯಲ್ಲಿ ಕೂಡ ತೇರ್ಗಡೆಯಾಗುವಂತೆ ಮಾಡಬೇಕು ಎಂದು ಹೇಳಿದರು.
ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಬಸವರಾಜ ಬಿರಾಜದಾರ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಉಪನ್ಯಾಸಕರುಗಳು ಮಾರ್ಗದರ್ಶನ ಮಾಡಬೇಕು. ಈ ನಮ್ಮ ಕಾರ್ಯಕ್ರಮಕ್ಕೆ ಡಾ.ಭುರ್ಲಿ ಪ್ರಹ್ಲಾದರವರು ಪುನಃಶ್ಚೇತನ ಕಾರ್ಯಾಗಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದು ಪ್ರಶಂಶಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಆರ್.ಜೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಭುರ್ಲಿ ಪ್ರಹ್ಲಾದ ಮಾತನಾಡಿ, ಖಾಸಗಿ, ಸರಕಾರಿ, ಅನಿದಾನಿತ ಎನ್ನದೇ ಎಲ್ಲರೂ ಒಂದಾಗಿ ಕಲಬುರಗಿ ಜಿಲ್ಲೆಯ ಫಲಿತಾಂಶ ಹೆಚ್ಚಳವಾಗುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು. ವಿದ್ಯಾರ್ಥಿಗಳು 21 ಅಂಕಗಳಿಸುವುದು ದೊಡ್ಡ ವಿಷಯವೇನಲ್ಲ, ಸತತ ಓದು, ಬರಹ ಮತ್ತು ಪುನರಾವರ್ತನೆಯಲ್ಲಿ ತೊಡಗಿದರೆ ವಿದ್ಯಾರ್ಥಿಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಸ್ವಾಗತವನ್ನು ಸ.ಪ.ಪೂ (ಎಮ್.ಪಿ.ಹೆಚ್.ಎಸ್) ಕಾಲೇಜಿನ ಉಪನ್ಯಾಸಕರಾದ ಸುಭಾಷ ರವರು ಕೋರಿದರು. ಮುಖ್ಯ ಅತಿಥಿಗಳಾಗಿ ಶ್ರೀಶೈಲಪ್ಪ ಬೋನಾಳ, ಜೆ.ಮಲ್ಲಪ್ಪ, ಚಂದ್ರಶೇಖರ ದೊಡ್ಡಮನಿ ಮತ್ತು ಬಿ.ಸಿ.ಚವ್ಹಾಣ ಉಪಸ್ಥಿತರಿದ್ದರು. ಸಂಘಟಕರಾಗಿ ಶ್ರೀನಿವಾಸ ಐ.ಜಿ., ವೆಂಕಟರಾಜು, ಭೀಮಯ್ಯ, ನಚಿಕೇತ, ಸೂರಾಚಂದ ಗಾಂಧಿ ಮುಂತಾದವರು ಇದ್ದರು.
ಉಪ ಪ್ರಾಚಾರ್ಯ ಕೇದಾರ ದೀಕ್ಷಿತ್ ನಿರೂಪಿಸಿದರು. ಮಳೇಂದ್ರ ಹಿರೇಮಠ, ಪ್ರಕಾಶ ಚವ್ಹಾಣ, ಪ್ರಕಾಶ ಕಾಂತೀಕರ, ಶಾಂತೇಶ ಹುಂಡೇಕಾರ, ದಿವ್ಯಾ ಪಟವಾರಿ, ವೈಶಾಲಿ ದೇಶಪಾಂಡೆ, ಹೃಷಿಕೇಶ ಜಹಗೀರದಾರ, ನವೀನ ಪಾಟೀಲ, ಸೇರಿದಂತೆ ಮತ್ತಿತರರು ಇದ್ದರು.







