ಕಲಬುರಗಿ | ಸಾಲ ಭಾದೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಅಫಜಲಪುರ: ತಾಲೂಕಿನ ಹಿಂಚಗೇರಾ ಗ್ರಾಮದ ಯುವ ರೈತ ಸಾಲ ಭಾದೆ ಹಾಗೂ ನಿರಂತರ ಬೆಳೆ ನಷ್ಟದಿಂದ ಮನನೊಂದು ಜಮೀನಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಬರೀಶ್ (21) ಆತ್ಮಹತ್ಯೆ ಮಾಡಿಕೊಂಡ ಯುವ ರೈತ.
ಅಂಬರೀಶ್ ಕುಟುಂಬದ ಮೇಲೆ ಕೆನರಾ ಬ್ಯಾಂಕ್‌ನ ಸುಮಾರು 6 ಲಕ್ಷ ಹಾಗೂ ಖಾಸಗಿಯಾಗಿ ಸುಮಾರು 10 ಲಕ್ಷ ಸಾಲವಿದ್ದು, ಸಾಲ ನೀಡಿದವರು ಆಗಾಗ ಹಣ ವಸೂಲಿಗಾಗಿ ಮನೆಗೆ ಬರುತ್ತಿದ್ದರಿಂದ ಕುಟುಂಬ ತೀವ್ರ ಮಾನಸಿಕ ಒತ್ತಡದಲ್ಲಿತ್ತು ಎಂದು ತಿಳಿದುಬಂದಿದೆ.
ವಿಷ ಸೇವಿಸಿದ ತಕ್ಷಣ ಅಂಬರೀಶ್ ಅವರನ್ನು ಕುಟುಂಬಸ್ಥರು ಅಫಜಲಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




