ಕಲಬುರಗಿ | ಪರೀಕ್ಷೆ ಬರೆಯಲು ತಂದೆಯ ಕೈ ಹಿಡಿದು ಉಕ್ಕಿ ಹರಿಯುತ್ತಿದ್ದ ನದಿ ದಾಟಿದ ಯುವತಿ !

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಯುವತಿಯೊರ್ವಳು ಪ್ರಾಣದ ಹಂಗು ತೊರೆದು ತನ್ನ ತಂದೆಯ ಕೈ ಹಿಡಿದು ಪರೀಕ್ಷೆ ಬರೆಯಲು ಉಕ್ಕಿ ಹರಿಯುತ್ತಿದ್ದ ನದಿ ದಾಟಿದ ಘಟನೆ ನಡೆದಿದೆ.
ಜಿಲ್ಲೆಯ ಸೇಡಂ ತಾಲೂಕಿನ ಸಂಗಾವಿ (ಟಿ) ಗ್ರಾಮದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ರಾಣಿ ಪರೀಕ್ಷೆ ಬರೆಯಲು ತಂದೆಯ ಕೈಹಿಡಿದು ಉಕ್ಕಿ ಹರಿಯುತ್ತಿದ್ದ ನದಿ ದಾಟಿದ ಘಟನೆ ನಡೆದಿದ್ದು, ಪರೀಕ್ಷೆ ಬರೆಯಲು ಸೇಡಂ ಪಟ್ಟಣಕ್ಕೆ ಹೋಗುವಾಗ ವಿದ್ಯಾರ್ಥಿನಿಯ ತಂದೆ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಮಗಳ ಕೈಹಿಡಿದು ಕಾಗಿಣಾ ನದಿ ದಾಟಲು ಹರಸಾಹಸ ಪಟ್ಟಿದ್ದಾರೆ.
ನಿರಂತರ ಮಳೆಯಿಂದ ವಿವಿಧಡೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಗಿಣಾ ನದಿಯು ಮೈದುಂಬಿ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದರೂ, ಯುವತಿ ನದಿ ದಾಟಿದ ವಿಡಿಯೋ ವೈರಲ್ ಆಗಿದೆ.
Next Story





