ಕಲಬುರಗಿ | ಪತ್ನಿಯ ಜೊತೆ ಅನೈತಿಕ ಸಂಬಂಧ ಆರೋಪ : ಆಪ್ತ ಸ್ನೇಹಿತನನ್ನೇ ಹತ್ಯೆಗೈದ ಪತಿ

ಅಜಯ್, ಅಂಬರೀಶ್
ಕಲಬುರಗಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಆರೋಪದ ಮೇರೆಗೆ ವ್ಯಕ್ತಿಯೊರ್ವ ತನ್ನ ಆಪ್ತ ಸ್ನೇಹಿತನನ್ನೇ ವೈಯರ್ ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಅಫಜಲಪುರ ಮೂಲದ ಅಂಬರೀಶ್ (28) ಎಂದು ಗುರುತಿಸಲಾಗಿದೆ.
ಕೊಲೆಯಾದ ಅಂಬರೀಶ್, ತನ್ನ ಸ್ನೇಹಿತ ಅಜಯ್ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಕುರಿತಾಗಿ ಗೊತ್ತಾದ ಬಳಿಕ ಅಜಯ್ ತನ್ನ ಸ್ನೇಹಿತ ಅಂಬರೀಶ್ ನನ್ನು ಬೆಂಗಳೂರಿನಿಂದ ಗ್ರಾಮಕ್ಕೆ ಕರೆಯಿಸಿಕೊಂಡಿದ್ದ, ಬಳಿಕ ಅಜಯ್ ಮತ್ತು ಆತನ ಸಂಗಡಿಗರು ಸೇರಿಕೊಂಡು ಅಂಬರೀಶ್ ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





