ಕಲಬುರಗಿ | ದಲಿತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ಖಂಡನಿಯ : ಸಿದ್ದು ಕೆರೂರ್

ಕಲಬುರಗಿ: ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರಿಗೆ ಬಳಸಿಕೊಳ್ಳುತ್ತಿರುವುದು ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜೇವರ್ಗಿ ತಾಲ್ಲೂಕು ಸಂಚಾಲಕ ಸಿದ್ದು ಕೆರೂರ್ ಆಕ್ರೋಶ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದಸಂಸ ರಾಜ್ಯ ಸಮಿತಿ "ಹೆಂಡ ಬೇಡ ಭೂಮಿ ಬೇಕು" ಎನ್ನುವ ಘೋಷಣೆ 80ರ ದಶಕದಲ್ಲಿ ಮೊಳಗಿಸಿತ್ತು. ಅದೇ ರೀತಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು, ಅರಣ್ಯ ಭೂಮಿ/ಸಾಮಾಜಿಕ ಅರಣೀಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪವನ್ನು ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪುಂಡಲಿಕ ಗಾಯಕವಾಡ, ವಿಜಯ್ ಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಸಮಿತಿಯ ಹರಿ ಕರಕಿಹಳ್ಳಿ, ಮಾಂತೇಶ್ ದೊರೆ, ಶರಣಬಸಪ್ಪ ಲಕಣಪುರ್, ಯಶವಂತ್ ಬಡಿಗೇರ, ರೇವಣಸಿದ್ದಪ್ಪ ಬಿರಾಳ, ಶ್ರೀಮಂತ ಕಿಲೇದಾರ, ಜೈ ಭೀಮ್ ನರಬೋಳ, ಬಸವರಾಜ ವರ್ಷನಳ್ಳಿ, ಭೀರಲಿಂಗ ಕೆಲ್ಲುರ, ಹನುಮಂತ್ ಜಟ್ನಾಕರ, ಮಲ್ಲಿಕಾರ್ಜುನ್ ಧನಕರ್, ಮಡಿವಾಳ ಸಾಗರ ಲಕ್ಷಣ ಡೊಳ್ಳೆ, ಸಾಯಬಣ್ಣ ಹರನಾಳ, ಸಿದ್ದಣ್ಣ ಹಂಚಿನಾಳ, ಶಂಕ್ರಪ್ಪ ಅಂಬರಖೆಡ, ಚಂದ್ರಶೇಖರ ಅಂಬರಾಖೇಡ, ಬಸವರಾಜ ನೆದಲಗಿ, ಕುಮಣ್ಣ ನೆದಲಗಿ, ಅಮೋಘಸಿದ್ದ ವರ್ಚನಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







