ಕಲಬುರಗಿ | ಸಿದ್ಧರಾಮೇಶ್ವರರ ತತ್ವಗಳು ಅಳವಡಿಸಿಕೊಳ್ಳಿ : ಮರಲಿಂಗ ಹೊನಗುಂಟಿಕರ್

ಕಲಬುರಗಿ : ಸೊನ್ನಲಗಿಯ ಕರ್ಮಯೋಗಿ ಸಿದ್ಧರಾಮೇಶ್ವರರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ತತ್ವ ಸಿದ್ಧಾಂತಗಳು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ ಹೊನಗುಂಟಿಕರ್ ಅಭಿಪ್ರಾಯಪಟ್ಟರು.
ನಿಗಮದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಕರ್ಮಯೋಗಿ ಸಿದ್ಧರಾಮೇಶ್ವರರ ಅವರ ಜಯಂತಿ ನಿಮಿತ್ತ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಈ ವೇಳೆ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಸತೀಶ್ ಕುಮಾರ, ಲಗಮಣ್ಣ ಸಿಬ್ಬಂದಿಗಳಾದ ಸಂಜೀವಕುಮಾರ, ಮಹೇಶ ಗುತ್ತೇದಾರ, ಸುನೀಲ, ದೇವೇಂದ್ರ ದೋತ್ರೆ, ಚನ್ನಬಸಪ್ಪ, ಸುನೀಲ್ ಪ್ರತಾಪೆ, ವಿವೇಕ ನಂದಿ, ರಂಗಪ್ಪ, ಹೊನ್ನಪ್ಪ, ರಮೇಶ, ರಾಮಣ್ಣ ಭಂಡಾರಿ, ವಿದ್ಯಾನಂದ ವಡೆಯರ ದಾನಮ್ಮ ಸೇರಿದಂತೆ ಇತರರರು ಇದ್ದರು.
Next Story





