ಕಲಬುರಗಿ | ಜಮೀನಿಗೆ ಕೃಷಿ ವಿಜ್ಞಾನಿಗಳ ಭೇಟಿ: ಭಾದಿತ ಬೆಳೆಗಳ ಪರಿಶೀಲಿಸಿ ಜಾಗೃತಿ

ಕಲಬುರಗಿ : ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ-1 ವಿಜ್ಞಾನಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಕಳೆ ಮತ್ತು ಬಸವನ ಹುಳು (ಶಂಖ) ಭಾದಿತ ಬೆಳೆಗಳನ್ನು ಪರಿಶೀಲಿಸಿ ರೈತರೊಂದಿಗೆ ನಿರ್ವಹಣಾ ಕ್ರಮಗಳನ್ನು ಚರ್ಚಿಸಲಾಯಿತು.
ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಯುಸುಫ್ ಅಲಿ ನಿಂಬರ್ಗಿ, ಮಣ್ಣು ವಿಜ್ಞಾನಿ ಡಾ.ಶ್ರೀನಿವಾಸ ಬಿ.ವಿ., ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕ ಡಾ.ವೀರಶೆಟ್ಟಿ ರಾಠೋಡ, ಸಿಬ್ಬಂದಿಗಳ ತಂಡ ಚಿಂಚೊಳಿ ತಾಲೂಕಿನ ನಾವದಗಿ, ಗಾರಂಪಳ್ಳಿ, ನಿಡಗುಂದಾ, ಶಿರೋಳ್ಳಿ ಮತ್ತು ಕಾಳಗಿ ತಾಲೂಕಿನ ರಾಯಕೊಡ, ತೇಗಲತಿಪ್ಪಿ ಮತ್ತು ಕೊಡದೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.
Next Story





