ಕಲಬುರಗಿ | ಅಯಾಜುದ್ದೀನ್ ಪಟೇಲ್‌ಗೆ ಹೈದರಾಬಾದ್ ಆರ್ಟ್ ಸೊಸೈಟಿ ಪ್ರಶಸ್ತಿ

ಕಲಬುರಗಿ: ಹೈದರಾಬಾದ್ ಆರ್ಟ್ ಸೊಸೈಟಿಯ 85ನೇ ಅಖಿಲ ಭಾರತ ಕಲಾ ಪ್ರದರ್ಶನ–2026ರಲ್ಲಿ ನೀಡಲಾಗುವ ಎಕ್ಸಲೆನ್ಸ್ ಅವಾರ್ಡ್ ಗೆ ಕಲಬುರಗಿಯ ಖ್ಯಾತ ಕಲಾವಿದ ಮುಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ 25,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಪಟೇಲ್ ಅವರ ಪ್ರಶಸ್ತಿ ಪಡೆದ ಚಿತ್ರಕೃತಿ “ಆಫ್ಟರ್ ಪೆಟ್ರೋಲ್ ಪ್ರೈಸ್” ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಮಿಕ್ಸ್ ಮೀಡಿಯಾ ಮಾಧ್ಯಮದಲ್ಲಿ ಕ್ಯಾನ್ವಾಸ್ ಮೇಲೆ ರಚಿಸಲಾಗಿದೆ. ಪೆಟ್ರೋಲ್ ದರ ಏರಿಕೆಯ ನಂತರ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಚಿತ್ರಕೃತಿ ಪ್ರತಿಬಿಂಬಿಸುತ್ತದೆ. ಅಂತಿಮವಾಗಿ ಎತ್ತುಬಂಡಿಯೇ ಶಾಶ್ವತ ಮತ್ತು ಸದಾ ಉಪಯುಕ್ತ ಸಾರಿಗೆ ಸಾಧನ ಎಂಬ ಸಂದೇಶವನ್ನು ಅವರು ಚಿತ್ರಕೃತಿಯ ಮೂಲಕ ನೀಡಿದ್ದಾರೆ.
ಸೊಸೈಟಿಯ ಕಾರ್ಯದರ್ಶಿ ಜೆಗಟಿ ವೆಂಕಟೇಶ್ವರಲು ಅವರು, ಪ್ರಶಸ್ತಿ ಪ್ರದಾನ ಸಮಾರಂಭವು ಜ.23ರಂದು ಹೈದರಾಬಾದ್‌ನ ನಾಂಪಲ್ಲಿ ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
Next Story





