ಕಲಬುರಗಿ | ಅಕ್ಷರದವ್ವ, ಕೃಷಿಯ ಋಷಿ ಪ್ರಶಸ್ತಿ ಪ್ರದಾನ

ಕಲಬುರಗಿ, ಜ.7: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳು ದಾರಿದೀಪಬೇಕಾದರೆ ನಮ್ಮ ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು. ಮಹಿಳೆಯರ ಕುರಿತಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸಾರಿಕಾದೇವಿ ಕಾಳಗಿ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ವಿಶ್ವ ರೈತ ದಿನಾಚರಣೆ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡ ಅಕ್ಷರದವ್ವ ಹಾಗೂ ಕೃಷಿಯ ಋಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ತಾಯಿ ಸಾವಿತ್ರಿಬಾಯಿ ಫುಲೆ, ಬಸವಣ್ಣ ಮತ್ತು ಡಾ. ಅಂಬೇಡ್ಕರ್‌ರವರು ಮಹಿಳೆಯರ ಸಮಾನತೆಗಾಗಿ ಹಾಕಿ ಕೊಟ್ಟ ಬುನಾದಿಯಿಂದ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದರು.
ತಾಲೂಕು ಕಸಾಪ ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಆರ್.ಜಿ. ಶಟಗಾರ, ಕಸಾಪ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಮಾಯಣ್ಣನವರ್, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಕವಿತಾ ಕವಳೆ, ಸುನೀತಾ, ಮಹಾನಂದಾ ಹುಲಿ, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಸೋಮಶೇಖರಯ್ಯ ಹೊಸಮಠ, ಬಸಯ್ಯಾ ಸ್ವಾಮಿ, ಶರಣಕುಮಾರ ಹಾಗರಗುಂಡಗಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ರಾಜಶೇಖರ ಪಾಟೀಲ ತೇಗಲತಿಪ್ಪಿ, ಈರಣ್ಣ ಸೋನಾರ, ರೇವಣಸಿದ್ದಪ್ಪ ಗುಂಡಗುರ್ತಿ, ಶಕುಂತಲಾ ಪಾಟೀಲ, ಶಾರದಾ ಕಂದಗೂಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಕ್ಷರದವ್ವ, ಕೃಷಿಯ ಋಷಿ ಪ್ರಶಸ್ತಿ
ಕೃಷಿ ಕ್ಷೇತ್ರದ ಶ್ರವಣಕುಮಾರ ದಯಾಮಣಿ, ಶ್ರವಣಕುಮಾರ ಪರಸ್ತಿ ಪಟ್ಟಣ, ಶಿವಶರಣಪ್ಪ ಪಿರಪ್ಪ ಸಲಗರ, ವೈಜನಾಥ ದೇವೀಂದ್ರ ಕಣ್ಣೂರ, ಮಲ್ಲಿನಾಥ ಶರಣಪ್ಪ ಹಾಗರಗಿ ಅವರನ್ನು ಕೃಷಿಯ ಋಷಿ ಪ್ರಶಸ್ತಿ ಹಾಗೂ ಮೀನಾಕ್ಷಿ ಎಸ್ ಬಬಲಾದ, ಅನೀತಾ ಪಾಲೇಕರ್, ಮಹಾಂತೇಶ್ವರ ಮೇತ್ರಿ, ಸಂಜೀವಕುಮಾರ ಫಿರಂಗಿ, ಮಂಜುಳಾ ಕುಲಕರ್ಣಿಯರಿಗೆ ಅಕ್ಷರದವ್ವ ಪ್ರಶಸ್ತಿ ನೀಡಲಾಯಿತು.







