ಕಲಬುರಗಿ | ಜು.16ರಂದು ಆಳಂದ ತಾಲ್ಲೂಕು ಸಿಪಿಐ ಸಮ್ಮೇಳನ: ಮೌಲಾ ಮುಲ್ಲಾ

ಕಲಬುರಗಿ: ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಸಮ್ಮೇಳನವನ್ನು ಜುಲೈ 16ರಂದು ಪಟ್ಟಣದ ಶಾಹಿನ ಫಂಕ್ಷನ್ ಹಾಲ್‌ನಲ್ಲಿ ಬೆಳಗಿನ 11:30ಗಂಟೆಗೆ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಚಿಂತಕರು, ಪಕ್ಷದ ಸದಸ್ಯರು, ಅಭಿಮಾನಿ ಕಾರ್ಯಕರು, ರೈತರು, ಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ಸಿಪಿಐ ಪಕ್ಷದ ರಾಜ್ಯ ಮಂಡಳಿಯ ಕಾರ್ಯದರ್ಶಿ ಮೌಲಾ ಮುಲ್ಲಾ ಅವರು ತಿಳಿಸಿದರು.
ಆಳಂದ ಪಟ್ಟಣದ ಸಿಪಿಐ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಘೋಷಣೆಯೊಂದಿಗೆ, ದುಡಿಯುವ ಜನರ ಉತ್ತಮ ಬದುಕಿಗಾಗಿ, ಸಮ ಸಮಾಜದತ್ತ ಜನರನ್ನು ಸಜ್ಜುಗೊಳಿಸುವ ಸಲುವಾಗಿ ಬರುವ ಮೂರು ವರ್ಷಗಳ ಕಾಲ ದುಡಿಯುವ ಜನರ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲು ಸಮ್ಮೇಳಣವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸಮ್ಮೇಳನವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಬಿ.ಅಮ್ಜದ್ ಉದ್ಘಾಟನೆ ಕೈಗೊಳ್ಳುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಪದ್ಮಾವತಿ ಮಾಲಿಪಾಟೀಲ ಆಗಮಿಸುವರು. ಸಿಪಿಐ ತಾಲೂಕು ಕಾರ್ಯದರ್ಶಿ ಮೈಲಾರಿ ಜೋಗೆ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಅಖಿಲ ಭಾರತ ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪಂಡಿತ ಸಲಗರೆ ಉಪಸ್ಥಿತರಿದ್ದರು.







