Kalaburagi | ಆಳಂದ ಶಾಸಕ ಬಿ.ಆರ್ ಪಾಟೀಲ್‌ಗೆ ಸಚಿವ ಸ್ಥಾನ ನೀಡಲು ಶಿವಕುಮಾರ್ ಯಲ್ದೆ ಆಗ್ರಹ

ಕಲಬುರಗಿ: ರಾಜ್ಯ ನೀತಿ ಮತ್ತು ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕರಾಗಿರುವ ಬಿ.ಆರ್.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಳಂದ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಶಿವಕುಮಾರ್ ಯಲ್ದೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ದೊಡ್ಡ ತಾಲ್ಲೂಕು ಎಂದು ಹೇಳಲಾಗುತ್ತಿರುವ ಆಳಂದ ತಾಲೂಕಿಗೆ ಇಲ್ಲಿಯವರೆಗೆ ಸಚಿವ ಸ್ಥಾನ ದೊರಕಿಲ್ಲ. ಈ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಚಿವ ಸ್ಥಾನ ಕೊಡಲೇಬೇಕಾಗಿದೆ ಎಂದು ಹೇಳಿದರು
ಶಾಸಕ ಬಿ.ಆರ್.ಪಾಟೀಲ ಅವರು ರಾಜಕೀಯ ಮುತ್ಸದ್ದಿ, ಅಭಿವೃದ್ಧಿ ಹರಿಕಾರ, ನಾಲ್ಕು ಬಾರಿ ಶಾಸಕ, ಉಪಾಸಭಾಪತಿ, ವಿಧಾನ ಪರಿಷತ್ ಸದಸ್ಯರಾಗಿ ಅನುಭವ ಹೊಂದಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು, ನಮ್ಮದೇ ಜಿಲ್ಲೆಯವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪಾಟೀಲ್ ಅವರನ್ನು ಪರಿಗಣಿಸಿ ಮಂತ್ರಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
Next Story





