ಕಲಬುರಗಿ | ಅನೈತಿಕ ಪೊಲೀಸ್ ಗಿರಿ ಆರೋಪ : ಪ್ರಕರಣ ದಾಖಲು

ಕಲಬುರಗಿ: ಯುವತಿಗೆ ಬೈಕ್‌ನಲ್ಲಿ ಲಿಫ್ಟ್ ಕೊಟ್ಟಿದ್ದಕ್ಕೆ ಯುವಕನೊರ್ವನ ಮೇಲೆ ಹಲ್ಲೆ ನಡೆಸಿ, ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲಪ್ಪ (21) ಹಲ್ಲೆಗೆ ಒಳಗಾದ ಯುವಕ ಎಂದು ತಿಳಿದುಬಂದಿದೆ.
ಯುವಕ -ಯುವತಿಯರಿಬ್ಬರೂ ಶಾಬದಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದು, ಯುವತಿಯು ಆಟೋ ಸಿಗದಿದ್ದಕ್ಕೆ ಡ್ರಾಪ್ ಕೊಡುವಂತೆ ಯುವಕನಲ್ಲಿ ವಿನಂತಿಸಿದ್ದಾರೆ. ಬೈಕ್ ಮೇಲೆ ಕೂರಿಸಿಕೊಂಡು ಡ್ರಾಪ್ ಕೊಡಲು ಹೋಗುತ್ತಿದ್ದ ವೇಳೆ ಬೈಕ್ ಅನ್ನು ನಿಲ್ಲಿಸಿದ ಆರೋಪಿಗಳು ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಗಾಯಗೊಂಡ ಬೈಲಪ್ಪರಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಒಳಗಾದ ಯುವಕ ಬೈಲಪ್ಪ ನೀಡಿದ ದೂರಿನ ಮೇರೆಗೆ ಕಲಬುರಗಿ ನಗರದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 93/2025 ಕಲಂ 189(2),191(2),115(2),118(1),310(2),352,351(2) ಸಂಗಡ 190 ಬಿ.ಎನ್.ಎಸ್-2023 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





