ಕಲಬುರಗಿ | ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿದವರು ಅಂಬೇಡ್ಕರ್ : ನಿಂಗಣ್ಣ ಹುಳಗೋಳಕರ್

ಕಲಬುರಗಿ : ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದoತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದ್ದಾರೆ.
ಶಹಾಬಾದ್ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ ಎಂದರು.
ಮುಖoಡರಾದ ಭೀಮರಾವ ಸಾಳುಂಕೆ ಹಾಗೂ ಅಮರ ಕೋರೆ ಮಾತನಾಡಿ, ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಎಲ್ಲವನ್ನೂ ಸಾಧಿಸಬಹುದೆಂದು ಅಂಬೇಡ್ಕರ್ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ನಡೆದು ಅವರಂತೆ ನೊಂದ ಮನುಷ್ಯರ ಕಣ್ಣೀರು ಓರೆಸುವ ಕೆಲಸ ಇಂದಿನ ದಿನಗಳಲ್ಲಿ ನಡೆಯಬೇಕಿದೆ. ಬಾಬಾ ಸಾಹೇಬರ ಭಾಚಿತ್ರಕ್ಕೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳ ಅನುಷ್ಠಾನವಾಗಬೇಕಿದೆ. ಆಗ ಮಾತ್ರ ದೇಶದಲ್ಲಿ ಸಮಗ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವ ಗೊಬ್ಬೂರಕರ, ಸದಾನಂದ ಕುಂಬಾರ, ನಾರಾಯಣ ಕಂದಕೂರ, ಕಾಶಣ್ಣ ಚನ್ನೂರ, ಶಿವಕುಮಾರ ಇಂಗಿನಶೆಟ್ಟಿ, ಶೀವಗೌಡ ಪಾಟೀಲ, ಅಶೋಕ ಜಿಂಗಾಡೆ, ನಾಗರಾಜ ಮೆಲಗಿರಿ, ಯಲ್ಲಪ್ಪ ದಂಡಗುಲಕರ, ಭೀಮಯ್ಯ ಗುತ್ತೆದಾರ, ದುರ್ಗಪ್ಪ ಪವಾರ, ಬಸವರಾಜ ಹಡಪದ, ಹರೀಷ, ಅವಿನಾಶ, ದತ್ತಾತ್ರೇಯ ಘಂಟಿ, ಮಾರುತಿ ಕೋರೆ, ಶ್ರೀನಾಥ ಪಾರಾ, ಶಿವಕುಮಾರ ಮೆತ್ರೆ, ಕ್ರಿಷ್ಣಮಾನೆ, ಶಶಿಕಲಾ ಸಜ್ಜನ, ನಂದಾ ಗುಡೂರ, ಪದ್ಮಾ ಕಟಕೆ, ಸನ್ನಿಧಿ ಕುಲಕರ್ಣಿ,ಶ್ರೀದೇವಿ ಅಲಬನೂರ, ಬಸಮ್ಮ ನಂದಿ, ರೇಖಾ ಅಡಕಿ, ಪುಷ್ಪ ಗೌಳಿ, ಅನುಪಮ, ವಿಜಯಲಕ್ಷ್ಮಿ ನಂದಿ, ಗುಂಡಮ್ಮ ಬೆಳಮಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಸವರಾಜ ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ದಿನೇಶ ಗೌಳಿ ವಂದಿಸಿದರು.







