ಕಲಬುರಗಿ: ಅಂಜುಕುಮಾರಿ ಜೆ. ವಂಟಿಗೆ ಪಿಎಚ್‌ಡಿ

ಕಲಬುರಗಿ: 'ಕಲಬುರಗಿಯ ಬಿಸಿ ಒಣ ವಾತಾವರಣದಲ್ಲಿ ಆಧುನಿಕ ಮನೆಗಳನ್ನು ತಂಪಾಗಿಸುವ ವ್ಯವಸ್ಥೆ ರೂಪಿಸಲು ಹೊಸ ವಿಧಾನ’ ಎಂಬ ಕುರಿತು ಇಲ್ಲಿನ ಭರತ್ ನಗರದ ನಿವಾಸಿ ಅಂಜುಕುಮಾರಿ ಜೆ. ವಂಟಿ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಅವರ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ಗೋಪಾಲನ್ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ಪ್ರಾಂಶುಪಾಲೆ ಡಾ. ವಿಮಲಾ ಸ್ವಾಮಿ ಅವರು ಮಾರ್ಗದರ್ಶನ ನೀಡಿದ್ದಾರೆ.
ಸದ್ಯ ಅಂಜುಕುಮಾರಿ, ಕಲಬುರಗಿಯ ಪಿಡಿಐ ಎಂಜಿನಿಯರಿoಗ್ ಕಾಲೇಜಿನಲ್ಲಿ ಅಸೋಸಿಯೆಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
Next Story





