Kalaburagi | ಕಲ್ಯಾಣ ಕರ್ನಾಟಕ ವಕೀಲರ ಸಹಕಾರಿ ಸಂಘದ ವಾರ್ಷಿಕ ಸಭೆ

ಕಲಬುರಗಿ: ನಗರದ ಗುಲ್ಬರ್ಗಾ ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘ ನಿಯಮಿತದ 4ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನ್ಯಾಯವಾದಿ ಅಂಬಾರಾಯ ಈ. ಪಟ್ಟಣಕರ್, ಸದಸ್ಯರ ಸಹಕಾರ ಮತ್ತು ವಿಶ್ವಾಸದಿಂದ ಸಂಘವು ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಸದಸ್ಯ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವ ಗುರಿಯನ್ನು ಸಂಘ ಹೊಂದಿದ್ದು, ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಆರ್ಥಿಕ ಪ್ರಗತಿ, ಸದಸ್ಯರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ರಾಜಕುಮಾರ ಎಸ್. ಕಡಗಂಚಿ, ರಮೇಶ ಎಸ್. ಕಡಾಳೆ, ಹಣಮಂತ ಎನ್. ಭಾವಿಕಟ್ಟಿ, ದೇವನಾಥ ಎಸ್. ಮಾಳಗಿ, ಹುಲಿಗೆಪ್ಪ ಎನ್. ಕನಕಗಿರಿ, ಸಂತೋಷಕುಮಾರ ಎಂ. ಮರಡಿ, ಸುರೇಶ ಜಿ. ಕುಲಕರ್ಣಿ, ಅಶೋಕ ಎಸ್. ಬೇನೂರ, ಶಿವಲಿಂಗ ಎನ್. ಪಡಶೆಟ್ಟಿ, ವಿಜಯಲಕ್ಷ್ಮೀ ಎಸ್. ಯರಗೋಳ, ಶಿವಕುಮಾರ ಜಿ. ಬೆಳಕೇರಿ, ಮಹ್ಮದ ಖಾದರ ಖಾನ್, ಫತ್ರುಬಿ ಅಬ್ದುಲ್ ಅಜೀಮ್, ನಾಮ ನಿರ್ದೇಶಕರಾದ ರಾಜು ಎಸ್. ಕೊರಳ್ಳಿ ಹಾಗೂ ಸುರೇಶ ಪಾಟೀಲ ಜೋಗೂರ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಅಶ್ವಿನಿ ಎಸ್.ಎಂ. ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಸದಸ್ಯರ ಅಭಿಪ್ರಾಯಗಳನ್ನು ಆಲಿಸಲಾಯಿತು.






