ಕಲಬುರಗಿ | ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

ಕಲಬುರಗಿ: ಸೇಡಂ ತಾಲೂಕಿನ ಬಟಗೇರಾ(ಕೆ) ಗ್ರಾಮದ 70 ವರ್ಷದ ವಯೋವೃದ್ಧರಾದ ಹಣಮಂತ ತಂದೆ ಸಾಯಪ್ಪ ಕೋಲಕುಂದಾ ಇವರು ದಿನಾಂಕ: 14-12-2024 ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸಂಬಂಧಿಕರ ಗ್ರಾಮವಾದ ಬೆಳಗುಂಪಾಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.
ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 202/2024 ಕಲಂ ರನ್ವಯ ಪ್ರಕರಣ ದಾಖಲಿಸಲಾಗಿದೆ. ಇವರು ಮಾನಸಿಕ ರೋಗದಿಂದ ಬಳಲುತ್ತಿದ್ದು, ಆಗಾಗ ಮನೆ ಬಿಟ್ಟು ಹೋಗಿ ಮರಳಿ ಮನೆ ಬರುತ್ತಿದ್ದರು. ಇವರು 5 ಅಡಿ 5 ಇಂಚು ಎತ್ತರ ಇದ್ದು, ಸಾದಾ ಮೈಬಣ್ಣ, ದುಂಡು ಮುಖ, ಬಿಳಿ ತಲೆ ಕೂದಲು ಇದ್ದು, ಬಿಳಿ ಬಣ್ಣದ ನೆಹರು ಶರ್ಟ್ ಮತ್ತು ಧೋತರ ಧರಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಈ ವಯೋವೃದ್ಧನ ಸುಳಿವು ಸಿಕ್ಕಲ್ಲಿ ಕೂಡಲೇ ಸೇಡಂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08441-276166, ಸಿಪಿಐ 08441-277026, ಹಾಗೂ ಸೇಡಂ ಪೊಲೀಸ್ ಠಾಣೆಯ ನಿಯಂತ್ರಣ ಕೋಣೆಗೆ ತಿಳಿಸುವಂತೆ ಕೋರಲಾಗಿದೆ.





