ಕಲಬುರಗಿ | ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ಅಲ್ಲಮಪ್ರಭು ಪಾಟೀಲ್‌ಗೆ ಮನವಿ

ಕಲಬುರಗಿ : ವಾರ್ಡ್ ನಂ.37ರ ವ್ಯಾಪ್ತಿಯಲ್ಲಿ ಬರುವ ರಸ್ತೆ ಸುಧಾರಣೆ ಮಾಡಬೇಕೆಂದು ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ವಾರ್ಡ್ ನಂ.37ರ ವ್ಯಾಪ್ತಿಯಲ್ಲಿ ಬರುವ ಕ್ರಾಸ್ದಿಂದ ಆನಂದ ಹೋಟೇಲ್ ವರೆಗೆ ರಸ್ತೆಯಲ್ಲಿರುವ ತೆಗ್ಗು/ಗುಂಡಿಗಳನ್ನು ಮುಚ್ಚಿಸಿ, ಘನಶ್ಯಾಮ ಅಪಾರ್ಟಮೆಂಟದಿಂದ ಲಾಳಗಿರಿ ಕ್ರಾಸ್ ವರೆಗೆ ಹೊಸದಾಗಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಮಾ.10ರವರೆಗೆ ಪೂರ್ಣಗೊಳಿಸಬೇಕು. ಶರಣಬಸವೇಶ್ವರ ಜಾತ್ರಾ ಮುಗಿಯುವವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಘನಶ್ಯಾಮ ಅಪಾರ್ಟಮೆಂಟದಿಂದ ಫೈರಸ್ಟೇಷನ್ ಒಳಗಡೆಯಿಂದ ಹಾಯ್ದು ಹೋಗಿರುವ ಕಿಲ್ಲಾವರೆಗೆ ಮಾಡಿದ ಹಳೆ ಡ್ರೈನ್ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಶಾಸಕರು ಬಂದು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಲ್ಯಾಣ ನಗರದಲ್ಲಿ ಹಳೆ ಯು.ಜಿ.ಡಿ. ಲೈನ್ ಇದ್ದು ಹೊಸದಾಗಿ ಪೈಪಲೈನನ್ನು ಹಾಕಿಸಬೇಕು. ಕಲ್ಯಾಣ ನಗರದ ರವಿ ಇವರ ಮನೆಯಿಂದ ವೆಂಕಟೇಶ ಕುಂಡಾ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಿಸಿ, ಘನಶ್ಯಾಮ ಅಪಾರ್ಟ್‌ಮೆಂಟ್ ನಿಂದ ಲಾಳಗಿರಿ ಕ್ರಾಸ ವರೆಗೆ ಯಾತ್ರಾರ್ಥಿಗಳಿಗೆ ಫುಟಪಾತ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಶಿವಕುಮಾರ ಬಾಳಿ, ಅಧ್ಯಕ್ಷ ಲೂಯಿಸ ಕೋರಿ, ಉಪಾಧ್ಯಕ್ಷೆ ಮಧುಮತಿ ಕೈಲಾಸಪತಿ, ಕಾರ್ಯದರ್ಶಿಗಳಾದ ತುಕಾರಾಮ ಕೊಳ್ಳೂರ, ಸಾಜೀದ ಅಹ್ಮದ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ರಾಮಲಿಂಗ ಮಠಪ, ಕೆ.ಮಲ್ಲಿನಾಥ ಸೇರಿದಂತೆ ಇತರರು ಹಾಜರಿದ್ದರು.







